ವಿಜಯಪುರ: ಭಾರೀ ಸಂಚಲನ ಮೂಡಿಸಿದ್ದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಕೇರಿ ಠಾಣಾ ವ್ಯಾಪ್ತಿಯ ಸಲಾದಹಳ್ಳಿ ಗ್ರಾಮದ ಹೊರವಲಯದಲ್ಲಿ ಮೊನ್ನೆ ಮಧ್ಯಾಹ್ನ ನಡೆದಿದ್ದ ಬಸವರಾಜ್ (19), ದಾವಲಭಿ (18) ಪ್ರೇಮಿಗಳ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರೇಮಿಗಳ ಹತ್ಯೆ ನಡೆಸಿದ್ದ ಆರೋಪಿಗಳಾದ ಯುವತಿ ತಂದೆ ಬಂದಗಿಸಾಬ್ ತಂಬದ್ (50), ಸಹೋದರ ದಾವಲ್‍ಪಟೇಲ್ (20), ಅಳಿಯರಾದ ಅಲ್ಲಾ ಪಟೇಲ್ (29), ರಫಿಕ್ (24) ಬಂಧನವಾಗಿದ್ದು, ಮತ್ತೋರ್ವ ಆರೋಪಿ ಲಾಳೆಸಾಬ್ ಗಾಗಿ ಹುಡುಕಾಟ ನಡೆದಿದೆ.

ಭೀಕರ ಹತ್ಯೆ ನಡೆದ ಸಲಾದಹಳ್ಳಿ ಗ್ರಾಮದ ಸುತ್ತ ಆರೋಪಿಗಳ ಪತ್ತೆಗೆ ಕಲಕೇರಿ ಪಿಎಸ್‍ಐ ಗಂಗೂಬಾಯಿ ಬಿರಾದಾರ್ ಬಲೆ ಬೀಸಿದ್ದರು. ಚಡಚಣ ಸಿಪಿಐ ಚಿದಂಬರಂ ಅವರು ಈ ಮೂರು ತಂಡಗಳಿಗೆ ನೇತೃತ್ವವನ್ನ ವಹಿಸಿಕೊಂಡಿದ್ದರು. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲು ಪೀಲ್ಡಿಗಿಳಿದಿದ್ದ ಖಾಕಿ ಪಡೆ, ಯಶಸ್ಸು ಕಂಡಿದ್ದು, ಇಂದು ನಾಲ್ವರು ಆರೋಪಿಗಳನ್ನು ಕಲಕೇರಿ ಪೊಲೀಸರು ಬಂಧಿಸಿದ್ದಾರೆ. ಯುವತಿ ತಂದೆ ಹಾಗೂ ಆಕೆ ಸಹೋದರ ಸೇರಿ ನಾಲ್ವರನ್ನು ಬಂಧಸಿದ್ದಾರೆ.

ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿತ್ತು. ದೇವರಹಿಪ್ಪರಗಿ, ಆಲಮೇಲ, ಕಲಕೇರಿ ಠಾಣೆಗಳ ಪಿಎಸ್‍ಐ ಒಳಗೊಂಡ ಮೂರು ತಂಡಗಳು ಹಂತಕರಿಗಾಗಿ ಎರಡು ದನದಿಂದ ಹುಡುಕಾಟ ನಡೆಸುತ್ತಿದ್ದರು.

ವಿಜಯಪುರದ ಲಾಡ್ಜ್, ಮಾರ್ಕೆಟ್, ದೇಗುಲಗಲ್ಲಿ ಆರೋಪಿಗಳಿಗಾಗಿ ದೇವರಹಿಪ್ಪರಗಿ ಪಿಎಸ್‍ಐ ರವಿ ಯಡವನ್ನವರ್ ಹುಡುಕಾಟ ನಡೆಸಿದರೆ, ಕಲಬುರಗಿ ಜಿಲ್ಲೆಯಲ್ಲಿ ಆಲಮೇಲ ಪಿಎಸ್‍ಐ ಸುರೇಶ ಗಡ್ಡಿ ತಂಡ ಬಲೆ ಬೀಸಿತ್ತು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

The post ಮರ್ಯಾದಾ ಹತ್ಯೆಯ ಆರೋಪಿಗಳು ಅಂದರ್ appeared first on Public TV.

Source: publictv.in

Source link