ಮರ ದತ್ತು ಪಡೆದು ಮಾದರಿಯಾದ ಸೋನಾಕ್ಷಿ ಸಿನ್ಹಾ

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮರ ದತ್ತು ಪಡೆದು ಪರಿಸರ ಕಾಳಜಿ ಮೆರೆದಿದ್ದಾರೆ.

ಸೋನಾಕ್ಷಿ ಸಿನ್ಹಾ ತಮ್ಮ ತಾಯಿ ಪೂನಮ್ ಹಾಗೂ ತಂದೆ ಶತ್ರುಘ್ನ ಸಿನ್ಹಾ ಜೊತೆಯಾಗಿ ಒಂದು ಗಿಡವನ್ನು ದತ್ತು ಪಡೆದಿದ್ದಾರೆ. ಗಿಡಕ್ಕೆ ನೀರೆರೆಯುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  2 ರಿಂದ 4 ವಾರದ ಒಳಗಡೆ ಮೂರನೇ ಕೊರೊನಾ ಅಲೆ – ತಜ್ಞರ ಎಚ್ಚರಿಕೆ

ನೀವು ಮರಗಳನ್ನು ದತ್ತು ಪಡೆಯಬಹುದು. ತೌಕ್ತೆ ಚಂಡಮಾರುತದಿಂದಾಗಿ ಮುಂಬೈನಲ್ಲಿ ಸುಮಾರು 2,363 ಮರಗಳು ಉರುಳಿ ಬಿದ್ದಿದೆ. ಇದಲ್ಲದೆ K ವೆಸ್ಟ್ ವಾರ್ಡ್‍ನಲ್ಲೂ 348 ಮರಗಳು ನಾಶವಾಗಿವೆ. ಉರುಳಿ ಬಿದ್ದ ಮರಗಳ ಜಾಗದಲ್ಲಿ ಮತ್ತೆ ಹೊಸ ಗಿಡಗಳನ್ನ ನೆಡುವ ಈ ಹೊಸ ಜವಾಬ್ದಾರಿಯನ್ನು ಮೆಚ್ಚಲೇಬೇಕು. MCGM K ವೆಸ್ಟ್ ವಾರ್ಡನ ಅಸಿಸ್ಟೆಂಟ್ ಕಮೀಷನರ್ MR. ಮೋಟೇ ಹಾಗೂ ಅವರ ತಂಡದ ಈ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಬರೆದುಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕವಾಗಿ ಎಲ್ಲರಲ್ಲೂ ಮರಗಳನ್ನ ದತ್ತು ಪಡೆಯುವಂತೆ ಮನವಿ ಮಾಡಿದ್ದಾರೆ.

 

View this post on Instagram

 

A post shared by Sonakshi Sinha (@aslisona)

ಸೋನಾಕ್ಷಿ ಭುಜ್-ದಿ ಪ್ರೈಡ್ ಆಫ್ ಇಂಡಿಯಾ ರಿಲೀಸ್ ಆಗಿ ಎದುರು ನೋಡುತ್ತಿರುವ ಸೋನಾಕ್ಷಿ, ಫಾಲೆನ್ ಸೀರಿಸ್‍ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಡಿಜಿಟಲ್ ಪ್ಲಾಟ್‍ಫಾರ್ಮ್‍ನಲ್ಲಿ ಸೋನಾಕ್ಷಿ ನಡಿಸುತ್ತಿದ್ದು, ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

The post ಮರ ದತ್ತು ಪಡೆದು ಮಾದರಿಯಾದ ಸೋನಾಕ್ಷಿ ಸಿನ್ಹಾ appeared first on Public TV.

Source: publictv.in

Source link