ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ? | Ranveer Vs Wild Ranveer singh with Bear Grylls


ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ?

ರಣವೀರ್ ಸಿಂಗ್

Ranveer Vs Wild: ಬೇರ್​ ಗ್ರಿಲ್ಸ್ ಜತೆ ರಣವೀರ್ ಸಿಂಗ್ ಸಾಹಸಕ್ಕೆ ಮುಂದಾಗಿದ್ದಾರೆ. ಈ ಎಪಿಸೋಡ್ ಜುಲೈ 8ರಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದ್ದು, ಇದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.

ರಣವೀರ್ ಸಿಂಗ್ (Ranveer Singh) ನಿಜ ಜೀವನದ ವ್ಯಕ್ತಿತ್ವದ ಬಗ್ಗೆ ಅನೇಕರಿಗೆ ಪರಿಚಯ ಇದೆ. ಯಾವ ವಿಚಾರವನ್ನೂ ಅವರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಸದಾ ಚಿಲ್ ಮೋಡ್ ಆನ್ ಮಾಡಿಕೊಂಡಿರುತ್ತಾರೆ. ಚಿತ್ರ ವಿಚಿತ್ರ ಬಟ್ಟೆ ಧರಿಸಿ ಪ್ರತ್ಯಕ್ಷವಾಗುತ್ತಾರೆ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಕೆಲವೊಮ್ಮೆ ಈ ವಿಚಾರಕ್ಕೆ ಅವರು ಟ್ರೋಲ್ ಆಗಿದ್ದು ಕೂಡ ಇದೆ. ಆದರೆ, ಈ ಬಗ್ಗೆ ರಣವೀರ್ ಸಿಂಗ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಈಗ ರಣವೀರ್ ಸಿಂಗ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಮೇಲೆ ಕರಡಿ ಒಂದು ದಾಳಿಗೆ ಇಳಿದಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ರಣವೀರ್ ಸಿಂಗ್ ಈ ರೀತಿಯ ಹುಚ್ಚು ಸಾಹಸಕ್ಕೆ ಇಳಿದಿದ್ದು ಬೇರ್ ಗ್ರಿಲ್ಸ್​ ಅವರ ‘ಮ್ಯಾನ್​ vs ವೈಲ್ಡ್​’ ಶೋಗಾಗಿ. ಬ್ರಿಟನ್ ಸಾಹಸಿ ಬೇರ್​ ಗ್ರಿಲ್ಸ್ ಸಖತ್ ಫೇಮಸ್. ಅವರು ಕಾಡುಗಳಲ್ಲಿ ಯಾವುದೇ ಭಯ ಇಲ್ಲದೆ ಸುತ್ತಾಟ ನಡೆಸುತ್ತಾರೆ. ಸಿಕ್ಕ ಸಿಕ್ಕ ಕೀಟಗಳನ್ನು ಹಿಡಿದು ತಿಂದು ತೇಗುತ್ತಾರೆ. ಕೆಲವರಿಗೆ ಇದು ವಾಕರಿಕೆ ತರಿಸಿದ್ದೂ ಇದೆ. ಈಗ ಬೇರ್​ ಗ್ರಿಲ್ಸ್ ಜತೆ ರಣವೀರ್ ಸಿಂಗ್ ಸಾಹಸಕ್ಕೆ ಮುಂದಾಗಿದ್ದಾರೆ. ಈ ಎಪಿಸೋಡ್ ಜುಲೈ 8ರಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದ್ದು, ಇದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.

ಇದಕ್ಕೆ ‘ರಣವೀರ್ vs ವೈಲ್ಡ್​’ ಎಂದು ಹೆಸರು ಇಡಲಾಗಿದೆ. ಈ ವಿಡಿಯೋದಲ್ಲಿ ರಣವೀರ್ ಅವರು ಬೇರ್​ ಗ್ರಿಲ್ಸ್​ ಜತೆ ಭಯಾನಕ ಕಾಡಿನಲ್ಲಿ ಸುತ್ತಾಟ ನಡೆಸಿದ್ದಾರೆ. ಹಂಚಿಕೊಂಡಿರುವ ವಿಡಿಯೋದಲ್ಲಿ ರಣವೀರ್ ಅವರನ್ನು ಕರಡಿಯೊಂದು ಬೆನ್ನುಹತ್ತಿ ಬಂದಿದೆ. ಅತಿ ದುರ್ಗಮ ಪ್ರದೇಶಗಳಲ್ಲಿ ರಣವೀರ್ ಸಿಂಗ್ ಸುತ್ತಾಟ ನಡೆಸಿದ್ದಾರೆ. ಅವರು ಮಲಗಿದ್ದಾಗ ಪಕ್ಕದಲ್ಲೇ ಕರಡಿಯೊಂದು ಬಂದು ನಿಂತಿರುವುದು ಕೂಡ ಈ ವಿಡಿಯೋದಲ್ಲಿದೆ. ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿರುವ ಈ ಥ್ರಿಲ್ಲಿಂಗ್​ ಶೋಗಾಗಿ ಫ್ಯಾನ್ಸ್ ಕಾದಿದ್ದಾರೆ.

TV9 Kannada


Leave a Reply

Your email address will not be published.