ಮಲಯಾಳಂ ಭಾಷೆಯಲ್ಲಿ ಟ್ವೀಟ್ ಮಾಡಿದ ಯುಎಇ ಪ್ರಧಾನಿಗೆ ಅರೇಬಿಕ್​ನಲ್ಲಿ ಉತ್ತರಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್ | Dubai Ruler, UAE Prime Minister Tweets In Malayalam Kerala Chief Minister Pinarayi Vijayan Replies In Arabic


ಮಲಯಾಳಂ ಭಾಷೆಯಲ್ಲಿ ಟ್ವೀಟ್ ಮಾಡಿದ ಯುಎಇ ಪ್ರಧಾನಿಗೆ ಅರೇಬಿಕ್​ನಲ್ಲಿ ಉತ್ತರಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಯುಎಇ ಪ್ರಧಾನಿ ಜೊತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರನ್ನು ಎಮಿರೇಟ್ಸ್‌ನಲ್ಲಿ ಭೇಟಿಯಾದ ಬೆನ್ನಲ್ಲೇ ಯುಎಇ (UAE) ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಮಲಯಾಳಂನಲ್ಲಿ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಟ್ವೀಟ್ ಅನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಟ್ವೀಟ್ ಜೊತೆಗೆ ಯುಎಇ ಪ್ರಧಾನ ಮಂತ್ರಿ ನಿನ್ನೆ ದುಬೈ ಎಕ್ಸ್‌ಪೋ 2020ರ ಸ್ಥಳದಲ್ಲಿ ಪಿಣರಾಯಿ ವಿಜಯನ್‌ ಅವರನ್ನು ಸ್ವಾಗತಿಸಿದ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಯುಎಇ ಪ್ರಧಾನಿ ಮಾಡಿದ ಟ್ವೀಟ್ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ಟ್ವಿಟರ್ ಪೇಜಿನಲ್ಲಿ ಹಂಚಿಕೊಂಡಿದ್ದಾರೆ. ಯುಎಇ ಕೇರಳದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ದುಬೈ ಮತ್ತು ಯುಎಇಯ ಆರ್ಥಿಕ ಮತ್ತು ಅಭಿವೃದ್ಧಿಯ ಬೆಳವಣಿಗೆಯಲ್ಲಿ ಕೇರಳಿಗರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ.

ಕುತೂಹಲಕರವಾದ ವಿಚಾರವೆಂದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ಅರೇಬಿಕ್ ಭಾಷೆಯ ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. “ನಿಮ್ಮ ಆತಿಥ್ಯ ಮತ್ತು ಆತ್ಮೀಯ ಸ್ವಾಗತದಿಂದ ನಾನು ವಿನಮ್ರನಾಗಿದ್ದೇನೆ” ಎಂದು ಪಿಣರಾಯಿ ವಿಜಯನ್ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಕೇರಳ ರಾಜ್ಯವು ಯುಎಇ ಮತ್ತು ದುಬೈನೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಬಯಸುತ್ತದೆ ಎಂದು ಕೂಡ ಸಿಎಂ ಪಿಣರಾಯಿ ವಿಜಯನ್ ಟ್ವೀಟ್​ ಮಾಡಿದ್ದಾರೆ.

TV9 Kannada


Leave a Reply

Your email address will not be published.