ಚಿಕ್ಕಮಗಳೂರು: ಮಲೆನಾಡಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ನದಿ, ಹಳ್ಳ, ಕೊಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಅದರಂತೆ ಕೊಪ್ಪ ತಾಲೂಕಿನ ತೀರ್ಥಕೆರೆ ಫಾಲ್ಸ್​ಗೆ ಮತ್ತೆ ಜೀವಕಳೆ ಬಂದಿದೆ. ಸುಮಾರು 100 ಅಡಿ ಎತ್ತರದಿಂದ ನೀರು ಚಿಮ್ಮುತ್ತಿದ್ದು, ತುಂಬಾ ಆಕರ್ಷಿಣೀಯವಾಗಿದೆ. ಕಳಸ-ಮೇಗುಂದಾ ಮಾರ್ಗದಲ್ಲಿ ತೀರ್ಥಕೆರೆ ಜಲಪಾತ ಸಿಗುತ್ತಿದೆ.

ಚಿಕ್ಕಮಗಳೂರಲ್ಲಿ ಸತತ 3 ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಪರಿಣಾಮ ಬಸರಿಕಟ್ಟೆ-ಕೂಗ್ರೆ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಇನ್ನು ತುಂಗ ಭದ್ರಾ ಮತ್ತು ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಅಲ್ಲದೇ ಕಳಸ ಸಮೀಪದ ಹೆಬ್ಬಾಳ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ.

 

The post ಮಲೆನಾಡಲ್ಲಿ ಮಳೆಯ ಆರ್ಭಟ; ತೀರ್ಥಕೆರೆ ಫಾಲ್ಸ್​ಗೆ ಮತ್ತೆ ಜೀವಕಳೆ appeared first on News First Kannada.

Source: newsfirstlive.com

Source link