ಮಲೆ ಮಹದೇಶ್ವರ ಬೆಟ್ಟ ಸೇರಿ ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ 5 ಹೊಸ ಹುಲಿ ಸಂರಕ್ಷಿತ ಅರಣ್ಯ ಘೋಷಣೆ | 5 new Tiger Reserves Forest likely in India this year including Male Mahadeshwar Hill


ಮಲೆ ಮಹದೇಶ್ವರ ಬೆಟ್ಟ ಸೇರಿ ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ 5 ಹೊಸ ಹುಲಿ ಸಂರಕ್ಷಿತ ಅರಣ್ಯ ಘೋಷಣೆ

ಹುಲಿ

ನವದೆಹಲಿ: ಭಾರತದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಇನ್ನೂ ಐದು ಸ್ಥಳಗಳನ್ನು ಹುಲಿ ಮೀಸಲು ಅರಣ್ಯ (Tiger Reserve Forest) ಎಂದು ಘೋಷಿಸಲಾಗುತ್ತದೆ. ಈ ಮೂಲಕ ಭಾರತದಲ್ಲಿ ಹುಲಿ ಮೀಸಲು ಅರಣ್ಯ ಪ್ರದೇಶಗಳ ಸಂಖ್ಯೆ 56ಕ್ಕೇರಲಿದೆ. ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟವನ್ನು (Male Mahadeshwara Hill) ಹುಲಿ ಸಂರಕ್ಷಿತ ಎಂದು ಘೋಷಿಸಲು ಈಗಾಗಲೇ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಮಲೆಮಹದೇಶ್ವರ ಬೆಟ್ಟ ಸೇರಿದಂತೆ ದೇಶದ ಐದು ಸ್ಥಳಗಳು ಹುಲಿ ಸಂರಕ್ಷಿತ ಮೀಸಲು ಪ್ರದೇಶಗಳಾಗಿ ಘೋಷಣೆಯಾಗಲಿವೆ.

ಈ ವರ್ಷದ ಅಂತ್ಯದ ವೇಳೆಗೆ ಇನ್ನೂ 5 ಸ್ಥಳಗಳನ್ನು ಔಪಚಾರಿಕವಾಗಿ ಹುಲಿ ಮೀಸಲು (ಟಿಆರ್) ಎಂದು ಘೋಷಿಸುವ ನಿರೀಕ್ಷೆಯಿದೆ. ಒಟ್ಟು ಹುಲಿ ಮೀಸಲು ಅರಣ್ಯಗಳ ಸಂಖ್ಯೆ 56ಕ್ಕೆ ಏರಲಿದೆ. ಕೇಂದ್ರವು ಈಗಾಗಲೇ ಮೂರು ಹೊಸ ತಾಣಗಳಿಗೆ ಹುಲಿ ಸಂರಕ್ಷಿತ ಸ್ಥಾನಮಾನವನ್ನು ನೀಡಲು ತನ್ನ ಅನುಮೋದನೆಯನ್ನು ನೀಡಿದೆ. ಇನ್ನೂ 2 ಸ್ಥಳಗಳಿಗೆ ಹುಲಿ ಸಂರಕ್ಷಿತ ಅರಣ್ಯದ ಸ್ಥಾನಮಾನ ನೀಡಲು ತನ್ನ ತಾತ್ವಿಕ ಅನುಮೋದನೆಯನ್ನು ನೀಡಿದೆ.

ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟ, ಛತ್ತೀಸ್‌ಗಢದ ಗುರು ಘಾಸಿದಾಸ್ ರಾಷ್ಟ್ರೀಯ ಉದ್ಯಾನವನ ಮತ್ತು ರಾಜಸ್ಥಾನದ ರಾಮಗಢ ವಿಶ್ಧಾರಿ ಹುಲಿ ರಕ್ಷಿತಾರಣ್ಯಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆದ ಮೂರು ಸ್ಥಳಗಳಾಗಿವೆ. ಆದರೆ, ತಾತ್ವಿಕವಾಗಿ ಅನುಮೋದನೆ ಪಡೆದ ಎರಡು ಅರುಣಾಚಲ ಪ್ರದೇಶದ ದಿಬಾಂಗ್ ವನ್ಯಜೀವಿ ಅಭಯಾರಣ್ಯ ಮತ್ತು ಬಿಹಾರದ ಕೈಮೂರ್ ವನ್ಯಜೀವಿ ಅಭಯಾರಣ್ಯ.

“ಕೇಂದ್ರ ಸರ್ಕಾರದ ತಾತ್ವಿಕ ಒಪ್ಪಿಗೆ ಸಿಕ್ಕಿರುವುದರಿಂದ ಸಂಬಂಧಿತ ರಾಜ್ಯಗಳು ಈಗ ಈ ಪ್ರದೇಶಗಳನ್ನು ಹುಲಿ ಮೀಸಲು ಅರಣ್ಯ ಎಂದು ಔಪಚಾರಿಕವಾಗಿ ಸೂಚಿಸಬೇಕಾಗುತ್ತದೆ. ಮತ್ತೊಂದೆಡೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ಅಡಿಯಲ್ಲಿ ರಾಜ್ಯಗಳಿಂದ ವಿವರವಾದ ಪ್ರಸ್ತಾವನೆಗಳನ್ನು ಕೋರುವ ಮೂಲಕ 2 ಸ್ಥಳಗಳಿಗೆ ತಾತ್ವಿಕ ಅನುಮೋದನೆಯನ್ನು ನೀಡಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಎನ್‌ಟಿಸಿಎ ಸೂಕ್ತ ಪರಿಶೀಲನೆಯ ನಂತರ ಪ್ರಸ್ತಾವನೆಯನ್ನು ರಾಜ್ಯಕ್ಕೆ ಶಿಫಾರಸು ಮಾಡುತ್ತದೆ. ಎಲ್ಲಾ 51 ಹುಲಿ ಮೀಸಲು ಅರಣ್ಯಗಳು ಒಟ್ಟಾಗಿ 73,765 ಚದರ ಕಿ.ಮೀ ಪ್ರದೇಶವನ್ನು ಒಳಗೊಂಡಿದೆ. “ಈ ವರ್ಷದ ಕೊನೆಯಲ್ಲಿ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆಯಲಿರುವ ಜಾಗತಿಕ ಹುಲಿ ಶೃಂಗಸಭೆಯ ಮೊದಲು ಎಲ್ಲಾ ಐದು ಹೊಸ ಸ್ಥಳಗಳನ್ನು ಔಪಚಾರಿಕವಾಗಿ ತಿಳಿಸಲಾಗುವುದು” ಎಂದು ಅಧಿಕಾರಿ ಹೇಳಿದ್ದಾರೆ.

ಹುಲಿ ಸಂರಕ್ಷಣೆ ಕುರಿತ 4ನೇ ಏಷ್ಯಾ ಸಚಿವರ ಸಮ್ಮೇಳನವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಪರಿಸರ ಸಚಿವ ಭೂಪೇಂದರ್ ಯಾದವ್, 2018ರಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಭಾರತದ ಯಶಸ್ಸಿನ ಕಥೆಯನ್ನು ಹಂಚಿಕೊಂಡರು. 2022ರ ಗುರಿಗಿಂತ ನಾಲ್ಕು ವರ್ಷ ಮುಂಚಿತವಾಗಿಯೇ ಭಾರತವು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ ಎಂದು ಒತ್ತಿ ಹೇಳಿದರು.

TV9 Kannada


Leave a Reply

Your email address will not be published. Required fields are marked *