ಮಲೈಕಾ-ಅರ್ಜುನ್​ ಕಪೂರ್ ಬ್ರೇಕ್​​ಅಪ್; ಯಾವನ್​ ರೀ ಹಾಗೆ ಹೇಳಿದ್ದು ಎಂದ ‘AK’


ಬಾಲಿವುಡ್​ ನಟ ಅರ್ಜುನ್​ ಕಪೂರ್​ ಹಾಗೂ ಮಲೈಕಾ ಅರೋರಾ ತಮ್ಮ ಲವ್ ಬ್ರೇಕ್​ ​ಅಪ್​ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಅರ್ಜುನ್ ಕಪೂರ್ ಇಂತಹ ಕೆಟ್ಟ ವದಂತಿಗಳಿಗೆ ನಮ್ಮಲ್ಲಿ ಸ್ಥಳವಿಲ್ಲ ಎಂದಿದ್ದಾರೆ.

ಮಲೈಕಾ ತಮ್ಮ ಪತಿ ಅರ್ಬಾಜ್ ಖಾನ್ ಅವರಿಂದ ಡಿವೋರ್ಸ್​ ಪಡೆದ ನಂತರ ಅರ್ಜುನ್​ ಕಪೂರ್​ ಅವರೊಂದಿಗೆ ಡೇಟ್​ ಮಾಡಲು ಆರಂಭಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಅರ್ಜುನ್​ ಹಾಗೂ ಮಲೈಕಾ ಡೇಟಿಂಗ್​ ಮಾಡುತ್ತಿದ್ದಾರೆ. ಇನ್ನು ಈ ಜೋಡಿ ನಡುವೆ ಸುಮಾರು 12 ವರ್ಷಗಳ ವಯಸ್ಸಿನ ಅಂತರ ಇದ್ದರೂ ಸಹ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿತ್ತಿದ್ದರು. ಈ ವಿಚಾರವಾಗಿ ಈ ಜೋಡಿ ಸಾಕಷ್ಟು ಬಾರಿ ಟ್ರೋಲ್​ ಕೂಡ ಆಗಿದ್ದರು. ಅದರೆ ಅರ್ಜುನ್ ಅಗಲಿ ಮಲೈಕಾ ಅಗಲಿ ಇದು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಟ್ರೋಲ್​ ಮಾಡುವವರಿಗೆ ಖಡಕ್​ ಉತ್ತರವನ್ನು ನೀಡುತ್ತಿದ್ದರು.

ಸದ್ಯ ಈ ಜೋಡಿ ನಡುವೆ ವೈಮನಸು ಮೂಡಿದೆ ಹೀಗಾಗಿ ಇಬ್ಬರು ಬ್ರೇಕ್​ ಅಪ್​ ಮಾಡಿಕೊಂಡಿದ್ದಾರೆ ಎಂಬ ವದಂತಿ ಬಿಟೌನ್​ ಅಂಗಳದಲ್ಲಿ ಕೇಳಿ ಬರುತ್ತಿತ್ತು. ಕಳೆದ ಆರು ದಿನಗಳಿಂದ ಮಲೈಕಾ ಬಹಳ ದುಃಖಿತರಾಗಿದ್ದು ತಮ್ಮ ಮನೆಯಿಂದ ಹೋರ ಬಂದಿಲ್ಲ ಅಂತಲೂ ವದಂತಿಗಳನ್ನು ಹರಿಬಿಡಲಾಗಿತ್ತು.

ಈ ನಡುವೆ ಅರ್ಜುನ್​ ಕಪೂರ್​ ಕಳೆದ ಮೂರು ದಿನಗಳ ಹಿಂದೆಯಷ್ಟೇ ಅವರ ಸಹೋದರಿ ರಿಯಾ ಕಪೂರ್​ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಕಾಲ ಕಳೆದು ಊಟ ಮಾಡಿ ಬಂದಿದ್ದರು. ಆದರೆ ಮಲೈಕಾ ಮನೆ ಕೂಡ ರಿಯಾ ಮನೆಯ ಸಮೀಪದಲ್ಲಿದರೂ ಸಹ ಅರ್ಜುನ್​ ಮಲೈಕಾರನ್ನ ನೋಡಲು ಅವರ ಮೆನೆಗೆ ಹೋಗಿಲ್ಲ ಎನ್ನಲಾಗಿತ್ತು.

ಆದರೆ ಪ್ರತಿ ಬಾರಿ ಅರ್ಜುನ್​ ಕುಟುಂಬಸ್ಥರ ಜೊತೆಗೆ ಯಾವುದೇ ಡಿನರ್​ ಪಾರ್ಟಿ ಇದ್ದರೂ ಅಲ್ಲಿ ಮಲೈಕಾ ಹಾಜರಾಗುತ್ತಿದ್ದರು. ಆದರೆ ಈ ಬಾರಿ ಮಲೈಕಾ, ರಿಯಾ ಮನೆಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಮಲೈಕಾ ಹಾಗೂ ಅರ್ಜುನ್​ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬ ಮಾತುಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.

News First Live Kannada


Leave a Reply

Your email address will not be published. Required fields are marked *