ನವದೆಹಲಿ: ದೇಶದ ಬ್ಯಾಂಕ್​​ಗಳಿಗೆ ಕನ್ನ ಹಾಕಿ ವಿದೇಶಗಳಿಗೆ ಪರಾರಿಯಾಗಿರುವ ಮೋಸ್ಟ್​ ವಾಂಟೆಡ್ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಷೇರುಗಳ ಮಾರಾಟದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ಮತ್ತೆ 792.11 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ ಅಂತಾ ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಮೂವರ ಆಸ್ತಿಗಳ ಮಾರಾಟದಿಂದ ಒಟ್ಟು 13 ಸಾವಿರದ 109 ಕೋಟಿ ರೂಪಾಯಿಯನ್ನು ವಸೂಲಿ ಮಾಡಲಾಗಿದೆ ಎಂದು ಇಡಿ ಅಧಿಕೃತ ಮಾಹಿತಿ ನೀಡಿದೆ. ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಲೀಕ ವಿಜಯ್​ ಮಲ್ಯ ಸುಮಾರು 9 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ಪಾವತಿ ಮಾಡಬೇಕಿತ್ತು.

ಪಂಜಾಬ್​ ನ್ಯಾಷನಲ್ ಬ್ಯಾಂಕ್​ಗೆ ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್​ ಚೋಕ್ಸಿ 13 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿತ್ತು. ಇದಕ್ಕೂ ಮೊದಲು ಎಸ್‌ಬಿಐ ನೇತೃತ್ವದ ಒಕ್ಕೂಟವು ಆಸ್ತಿಗಳನ್ನು ಹರಾಜು ಹಾಕುವ ಮೂಲಕ 7 ಸಾವಿರದ 181 ಕೋಟಿ ರೂಪಾಯಿಯನ್ನು ವಸೂಲಿ ಮಾಡಿತ್ತು.

ಇದನ್ನೂ ಓದಿ: ಬ್ಯಾಂಕ್​​ಗಳಿಗೆ ಕೊಂಚ ನಿರಾಳ.. ಮಲ್ಯ, ನೀರವ್, ಚೋಕ್ಸಿಗೆ ಸೇರಿದ ₹9,000 ಕೋಟಿ ಆಸ್ತಿ ಹಸ್ತಾಂತರ

The post ಮಲ್ಯ, ನೀರವ್, ಚೋಕ್ಸಿಗೆ ಶಾಕ್; ಮತ್ತೆ ₹792.11 ಕೋಟಿ ವಸೂಲಿ appeared first on News First Kannada.

Source: newsfirstlive.com

Source link