
ಕೆ.ಎಸ್.ಈಶ್ವರಪ್ಪ
ತೆಲಸಂಗ ಗ್ರಾಮದ ವಿಠಲರಾಯ ಜಾತ್ರೆಗೆ ಆಗಮಿಸಿದ್ದ ಈಶ್ವರಪ್ಪ, ಹಿಂದು ದೇವಸ್ಥಾನ ಪುಡಿ ಮಾಡಿ ಮಸೀದಿ ಕಟ್ಟಿದ್ದಾರೆ. ದೇವಸ್ಥಾನ ಪುಡಿ ಮಾಡಿ ಕಟ್ಟಿದ ಒಂದೇ ಒಂದು ಮಸೀದಿಯನ್ನು ನಾವು ಬಿಡಲ್ಲ. ಮಳಲಿ ಮಸೀದಿ ಒಂದೆ ಅಲ್ಲ, 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಿಸಿದ್ದಾರೆ. ಮಸೀದಿ ಕಟ್ಟಲು ನಮ್ಮದು ಯಾವುದೇ ಅಭ್ಯಂತರ ಇಲ್ಲ. ಹಿಂದು ದೇವಸ್ಥಾನ ಕೆಡವಿ ಕಟ್ಟಿರೋದನ್ನ ನಾವು ಬಿಡಲ್ಲ ಉಳಿಸಿಕೊಳ್ಳುತ್ತೇವೆ.
ಚಿಕ್ಕೋಡಿ: ಮಳಲಿ ಮಸೀದಿ ಒಂದೇ ಅಲ್ಲ, ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಲಾಗಿದೆ. ಆ 36 ಸಾವಿರ ದೇವಸ್ಥಾನವನ್ನು ಕಟ್ಟುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ತೆಲಸಂಗ ಗ್ರಾಮದ ವಿಠಲರಾಯ ಜಾತ್ರೆಗೆ ಆಗಮಿಸಿದ್ದ ಈಶ್ವರಪ್ಪ, ಹಿಂದು ದೇವಸ್ಥಾನ ಪುಡಿ ಮಾಡಿ ಮಸೀದಿ ಕಟ್ಟಿದ್ದಾರೆ. ದೇವಸ್ಥಾನ ಪುಡಿ ಮಾಡಿ ಕಟ್ಟಿದ ಒಂದೇ ಒಂದು ಮಸೀದಿಯನ್ನು ನಾವು ಬಿಡಲ್ಲ. ಮಳಲಿ ಮಸೀದಿ ಒಂದೆ ಅಲ್ಲ, 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಿಸಿದ್ದಾರೆ. ಮಸೀದಿ ಕಟ್ಟಲು ನಮ್ಮದು ಯಾವುದೇ ಅಭ್ಯಂತರ ಇಲ್ಲ. ಹಿಂದು ದೇವಸ್ಥಾನ ಕೆಡವಿ ಕಟ್ಟಿರೋದನ್ನ ನಾವು ಬಿಡಲ್ಲ ಉಳಿಸಿಕೊಳ್ಳುತ್ತೇವೆ. ಈಗಾಗಲೇ ಸರ್ಕಾರದಿಂದ ಸರ್ವೆ ನಡೆಯುತ್ತಿದೆ. ಅಯೋಧ್ಯೆ ಬಗ್ಗೆ ಹೀಗೆ ಹೇಳುತ್ತಿದ್ದರು, ಈಗ ಅಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈಗಾಗಲೇ ಕಾಶಿಯಲ್ಲೂ ಸರ್ವೆ ನಡೆಯುತ್ತಿದೆ. ಕಾನೂನು ಬದ್ಧವಾಗಿ ಕೋರ್ಟ್ ಆರ್ಡರ್ ಪಡೆದು ಎಲ್ಲವನ್ನೂ ಮಾಡುತ್ತೇವೆ. ಲಕ್ಷ್ಮಣ ಸವದಿ ನನ್ನ ಆತ್ಮೀಯ ಸ್ನೇಹಿತ. ಅವರು ಉಪ ಮುಖ್ಯಮಂತ್ರಿ ಆಗಲೆಂದು ಮನಸ್ಸಿನ ಭಾವನೆ ವ್ಯಕ್ತ ಪಡಿಸಿದ್ದೇನೆ. ಅವರು ಉಪಮುಖ್ಯಮಂತ್ರಿ ಆಗಲಿ ಎಂಬುದು ನನ್ನ ಆಸೆ. ಭಗವಂತ ಬಯಸಿದಾಗ ನಾನು ಮತ್ತೆ ಮಂತ್ರಿಯಾಗೋದು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದ್ರು.