ಮಳಲಿ ಮಸೀದಿ ವಿವಾದ; ಅರ್ಜಿ ವಿಚಾರಣೆ ಜೂನ್ 9ಕ್ಕೆ ಮುಂದೂಡಿದ ಮಂಗಳೂರು ಕೋರ್ಟ್ | Malali mosque case mangaluru court postponed hearing to june 9


ಮಳಲಿ ಮಸೀದಿ ವಿವಾದ; ಅರ್ಜಿ ವಿಚಾರಣೆ ಜೂನ್ 9ಕ್ಕೆ ಮುಂದೂಡಿದ ಮಂಗಳೂರು ಕೋರ್ಟ್

ಮಳಲಿ ಮಸೀದಿ ವಿವಾದ

ಮಳಲಿ ಮಸೀದಿ ವಿವಾದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಮತ್ತೆ ಜೂನ್ 9ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಇಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಮತ್ತೆ ಜೂನ್ 9ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಮಳಲಿ ಮಸೀದಿ ಜಾಗದ ವಿವಾದ ಕೋರ್ಟ್ ನಲ್ಲಿ ನಿತ್ಯ ಒಂದೊಂದು ಹಂತ ತಲುಪುತ್ತಿದೆ. ಇಂದು ಮಂಗಳೂರಿನ ಕೋರ್ಟ್ ನಲ್ಲಿ ಏನೇನಾಯ್ತು. ಕೋರ್ಟ್ನಲ್ಲಿ ನಡೆದ ವಾದ ವಿವಾದದ ಸಂಪೂರ್ಣ ವರದಿ ಇಲ್ಲಿದೆ.

ಮಂಗಳೂರಿನ ಮಳಲಿ ಮಸೀದಿ ವಿವಾದ ವಿಚಾರ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ನೆಡೆಯುತ್ತಿದೆ. ವಿಎಚ್ಪಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಅಂತಾ ಮಸೀದಿ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು. ಇಂದು ಕೂಡ ಅರ್ಜಿ ವಿಚಾರಣೆ ನಡೆಯಿತು. ಅರ್ಜಿ ವಿಚಾರಣೆ ನಡೆಸಿ ಇಂದು ಆದೇಶದ ನಿರೀಕ್ಷೆಯಲ್ಲಿದ್ದವರಿಗೆ ನ್ಯಾಯಾಲಯ ಮತ್ತೆ ವಿಚಾರಣೆಗೆ ಅವಾಕಾಶ ನೀಡಿ ಅಚ್ಚರಿಯನ್ನುಂಟು ಮಾಡಿದೆ.

TV9 Kannada


Leave a Reply

Your email address will not be published.