ಮಂಡ್ಯ: ರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್ ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.
ಸೈಯದ್ ನಾಸೀರ್ ಎಂಬುವವರಿಗೆ ಸೇರಿದ ಮನೆ ಅದಾಗಿದೆ. ರಾತ್ರಿ ಮನೆ ಕುಸಿಯುವ ಮುನ್ನ ಜೋರಾದ ಶಬ್ದ ಆಗಿದೆ. ಶಬ್ದ ಕೇಳಿಸುತ್ತಿದ್ದಂತೆ ಸೈಯದ್ ನಾಸೀರ್, ಹೆಂಡತಿ, ಮೂವರು ಮಕ್ಕಳು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಇದಿರಿಂದಾಗಿ ಭಾರೀ ಅನಾಹುತ ಒಂದು ತಪ್ಪಿದೆ.
ಮನೆಯಲ್ಲಿದ್ದ ದಿನಸಿ ಪದಾರ್ಥಗಳು, ಬೀರು, ಪಾತ್ರೆಗಳು ಸೇರಿದಂತೆ ವಸ್ತುಗಳು ನೆಲಸಮ ಆಗಿದೆ. ಮನೆ ಕಳೆದುಕೊಂಡ ಕುಟುಂಬ ಕಂಗಾಲಾಗಿದ್ದು, ಸರ್ಕಾರದಿಂದ ಪಾರಿಹಾರ ನಿರೀಕ್ಷೆ ಮಾಡ್ತಿದೆ. ಇನ್ನು ಕೆ.ಆರ್.ಪೇಟೆ ತಾಲೂಕಿನಾದ್ಯಂತ ಕೂಡ ಭರ್ಜರಿ ಮಳೆ ಆಗಿದೆ. ಮಳೆಗೆ ಕೆ.ಆರ್.ಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಜಲಾವೃತವಾಗಿದೆ.
ಕಳೆದ ತಿಂಗಳ ಬಸ್ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿತ್ತು. ಏಕಾಏಕಿ ಹೋಟೆಲ್, ಬೇಕರಿ ಸೇರಿದಂತೆ ವಿವಿಧ ಅಂಗಡಿ ಮಳಿಗೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಅವಾಂತರ ಸೃಷ್ಟಿಯಾಗಿದೆ.