ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮನೆ ಒಂದರ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸತತ ಮಳೆಯಿಂದ ಗೋಡೆ ಶಿಥಿಲಗೊಂಡಿತ್ತು. ಗೋಡೆ ಕುಸಿತದಿಂದ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾಳೆ. 24 ವರ್ಷದ ತ್ರಿವೇಣಿ ಮೃತ ದುರ್ದೈವಿ. ತ್ರಿವೇಣಿ, ಗಂಡ ಕೃಷ್ಣಮೂರ್ತಿ, ಅತ್ತೆ ತಿಪ್ಪಮ್ಮ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಗೋಡೆ ಕುಸಿದು ತ್ರಿವೇಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೃಷ್ಣಮೂರ್ತಿ, ತಿಪ್ಪಮ್ಮಗೆ ಸಣ್ಣಪುಟ್ಟ ಗಾಯವಾಗಿದ್ದು, ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಪ್ರೀತಿಸಿ ಮದ್ವೆ ಆಗಿ.. ಕನಸಿನ ಕೂಸಿನ ನಿರೀಕ್ಷೆಯಲ್ಲಿದ್ದ ದಂಪತಿ ಮಲಗಿದ್ದಲ್ಲೇ ಜೀವಂತ ಸಮಾಧಿ
ಮೂರ್ನಾಲ್ಕು ದಿನಗಳ ಹಿಂದಷ್ಟೇ ಮನೆ ಗೋಡೆ ಕುಸಿದು ಮೂರು ಮಂದಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಹಿರಿಯೂರು ತಾಲೂಕು ಬುರುಜಿನರೊಪ್ಪ ಗ್ರಾಪಂ ವ್ಯಾಪ್ತಿಯ ಹೋ.ಚಿ. ಬೋರಯ್ಯನಹಟ್ಟಿಯಲ್ಲಿ ಮೂವರು ಮೃತಪಟ್ಟಿದ್ದರು. ಇದೀಗ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.
ಇದನ್ನೂ ಓದಿ:ದಾರುಣ ಘಟನೆ; ಪಕ್ಕದ ಮನೆಯ ಗೋಡೆ ಕುಸಿದು ಮಲಗಿದ್ದಲ್ಲೇ ದಂಪತಿ ಜೀವಂತ ಸಮಾಧಿ