ಮಳೆಗೆ ಮುಳುಗುತ್ತಿದೆ ಬೆಂಗಳೂರು; ಬಿಬಿಎಂಪಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಾಯದ ಅಂಚಿನಲ್ಲಿದೆ ಈ 10 ಪ್ರದೇಶಗಳು | Bengaluru rains top ten places in danger due to heavy rain


ಬೆಂಗಳೂರು: ಅಕಾಲಿಕ ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿದ್ದಾರೆ. ಬೆಂಗಳೂರಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಇನ್ನೂ 2 ದಿನ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಧಾರಾಕಾರ ಮಳೆಗೆ ರಸ್ತೆಗಳೇ ಕೆರೆಗಳಂತಾಗಿವೆ, ಹುಳ, ಹಪಟೆಗಳು ಮನೆ ಹೊಕ್ಕಿವೆ. ಇದಕ್ಕೆಲ್ಲಾ ಬಿಬಿಎಂಪಿ (BBMP) ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಬೆಂಗಳೂರಿನ ಈ 10 ಪ್ರದೇಶಗಳು ಮಳೆಯಿಂದಾಗಿ ಅಪಾಯಕ್ಕೆ ಸಿಲುಕಿವೆ. ಅವುಗಳು ಯಾವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಳೆ ಹೊಡೆತಕ್ಕೆ ಬೆಂಗಳೂರಿನ ಮಂತ್ರಿಮಾಲ್, ಮೆಜೆಸ್ಟಿಕ್, ಸದಾಶಿವನಗರ, ಓಕುಳಿಪುರಂ, ನಾಯಂಡಳ್ಳಿ ಕೆಳ ಸೇತುವೆ ರಸ್ತೆ, ದತ್ತಾತ್ರೇಯನಗರ, ಹೊಸಕೆರೆಹಳ್ಳಿಯಲ್ಲಿ ಮಳೆಗೆ ಅವಾಂತರವೇ ಸೃಷ್ಟಿಯಾಗುತ್ತದೆ. ಆರ್.ಆರ್. ನಗರ, ಮೈಸೂರು ರಸ್ತೆ, ಗಾಳಿ ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಬನ್ನೇರಘಟ್ಟ ರಸ್ತೆ, ಬಿಳಿಕಳ್ಳಿ, ಅರಕೆರೆ, ಕೋರಮಂಗಲ, ವಿಲ್ಸನ್ ಗಾರ್ಡನ್ ಮುಳುಗಿ ಹೋಗುತ್ತವೆ. ಲಾಲ್​ಬಾಗ್​ ರೋಡ್, ಶಾಂತಿನಗರ, ಬಾಪೂಜಿ ನಗರ ಹಾಗೂ ಹೊಸಗುಡ್ಡದಹಳ್ಳಿಯಲ್ಲಿ ಅನಾಹುತಗಳು ಸೃಷ್ಟಿಯಾಗಿದೆ.

ಇದನ್ನೂ ಓದಿ:

ಮಳೆ ಹಾನಿ ಕುರಿತು ಅಧಿಕಾರಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ; ಮುಖ್ಯಾಂಶಗಳು ಇಲ್ಲಿದೆ

Bengaluru News: ಬೆಂಗಳೂರು ನಗರದಲ್ಲಿ ಇನ್ನೂ 2 ದಿನ ಸಾಧಾರಣ ಮಳೆ ಸಾಧ್ಯತೆ

 

TV9 Kannada


Leave a Reply

Your email address will not be published. Required fields are marked *