ಶಿವಮೊಗ್ಗ: ಶಿವಮೊಗ್ಗದ ಗಾಜನೂರು ತುಂಗಾ ಜಲಾಶಯದಿಂದ 21 ಕ್ರಸ್ಟ್​ಗೇಟ್ ಮೂಲಕ 2020 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ತುಂಗಾ ಜಲಾಯಶದಲ್ಲಿ ಒಟ್ಟು 22 ಕ್ರಸ್ಟ್ ಗೇಟ್​ಗಳ ಪೈಕಿ 21 ಗೇಟ್ ಓಪನ್ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ನದಿಗಳು ಹಾಗೂ ಡ್ಯಾಂಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಜಲಾಶಯದಿಂದ ವಿದ್ಯುತ್ ಉತ್ಪಾದನೆಗೆ 5,300 ಕ್ಯೂಸೆಕ್ ನೀರು ಬಿಡುಗಡೆ ಮಾಲಾಗಿದ್ರೆ.. ನದಿಗೆ ಒಟ್ಟು 7300 ಕ್ಯೂಸೆಕ್​ನಷ್ಟು ನೀರನ್ನ ನದಿಗೆ ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳಲ್ಲೇ 3.24 ಟಿಎಂಸಿ ಸಾಮಾರ್ಥ್ಯದ ತುಂಗಾ ಜಲಾಶಯ ಗರಿಷ್ಟ ಮಟ್ಟ ತಲುಪಿದೆ ಎನ್ನಲಾಗಿದೆ.

The post ಮಳೆಯಿಂದ ತುಂಬಿಹರಿದ ನದಿಗಳು: ತುಂಗಾ ಜಲಾಶಯದಿಂದ 2020 ಕ್ಯೂಸೆಕ್ ನೀರು ಬಿಡುಗಡೆ appeared first on News First Kannada.

Source: newsfirstlive.com

Source link