ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ರಸ್ತೆಯಲ್ಲಿ ಏಕಾಏಕಿ ಉಂಟಾದ ಹೊಂಡಕ್ಕೆ ಕಾರೊಂದು ಹೂತು ಹೋಗಿರುವ ಘಟನೆ ವರದಿಯಾಗಿದೆ.

ದೆಹಲಿಯ ದ್ವಾರಕ ನಗರದಲ್ಲಿ ಕಾರೊಂದನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ರಸ್ತೆಯಲ್ಲಿ ಏಕಾಏಕಿ ದೊಡ್ಡ ಹೊಂಡ ಸೃಷ್ಟಿಯಾಗಿ ಕಾರು ಹೊಂಡದೊಳಗಡೆ ಹೂತು ಹೋಗಿದೆ. ಬಳಿಕ ಕಾರನ್ನು ಕ್ರೆನ್ ಮೂಲಕ ಮೇಲಕ್ಕೆತ್ತಲಾಗಿದೆ. ಕಾರಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರೆಲ್ಲ ಬಾಹುಬಲಿ: ಪ್ರಧಾನಿ ಮೋದಿ

ದೆಹಲಿ ಕಳೆದ ಒಂದು ವಾರದಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಾದ ರಿಂಗ್ ರಸ್ತೆ, ಪ್ರಗತಿ ಮೈದಾನ, ಪಾಲಂ, ಲಜಪತ್ ನಗರ, ಆರ್.ಕೆ ಪುರಂ, ಸಾಕೇತ್, ತಿಲಕ್ ನಗರ ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡಿದೆ.

The post ಮಳೆಯಿಂದ ಬಾಯಿಬಿಟ್ಟ ರಸ್ತೆಗೆ ಬಿತ್ತು ಕಾರು appeared first on Public TV.

Source: publictv.in

Source link