ರಾಯಚೂರು: ಮಳೆಯ ಅಬ್ಬರ ಜೋರಾಗಿರೋ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಇಂದು ಅವಾಂತರ ಸೃಷ್ಟಿಯಾಗಿತ್ತು.

ಮಂತ್ರಾಲಯದ ಮದುವೆ ಮಂಟಪಕ್ಕೆ ಮಳೆ ನೀರು ನುಗ್ಗಿದ್ದರಿಂದ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದರಿಂದ ಮದುವೆಗೆ ಬಂದಿದ್ದ ಜನರು ಫಜಿತಿಗೆ ಸಿಲುಕಿದ್ರು.

ಇನ್ನು ಮಂತ್ರಾಲಯದಲ್ಲಿನ ಕರ್ನಾಟಕ ಭವನಕ್ಕೂ ಮಳೆ ನೀರು ನುಗ್ಗಿತ್ತು. ರಸ್ತೆ ತುಂಬಾ ನೀರು ನಿಂತಿದ್ದರಿಂದ ವಾಹನ ಸವಾರರೂ ಪರದಾಟ ನಡೆಸಿದ್ರು. ಅಲ್ಲದೇ ಕೆಲವು ವಾಹನ ಸವಾರರು ನೀರಿನಲ್ಲಿ ಗಾಡಿ ಚಲಾಯಿಸುವ ದುಸ್ಸಾಹಸ ಮಾಡಿರೋದು ಕಂಡುಬಂತು.

ಕೆಲ ಗಂಟೆಗಳ ಕಾಲ ನೀರು ತುಂಬಿಕೊಂಡಿದ್ದರಿಂದ ಅಲ್ಲಿಯ ಜನ-ಜೀವನ ಸಹಜವಾಗಿಯೇ ಅಸ್ತವ್ಯಸ್ತ ಉಂಟಾಗಿತ್ತು. ಮಧ್ಯಾಹ್ನದ ವೇಳೆ ನೀರು ಸಂಪೂರ್ಣ ಹರಿದುಹೋಗಿದ್ದು, ಮಂತ್ರಾಲಯ ಸ್ವಲ್ಪ ಸುಧಾರಿಸಿಕೊಂಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

The post ಮಳೆಯ ಆರ್ಭಟಕ್ಕೆ ತತ್ತರಿಸಿದ ಮಂತ್ರಾಲಯ.. ಮದ್ವೆಗೆ ಬಂದು ಫಜಿತಿಗೆ ಸಿಲುಕಿದ ಜನ appeared first on News First Kannada.

Source: newsfirstlive.com

Source link