ಬಳ್ಳಾರಿ: ಅಕಾಲಿಕ ಮಳೆಗೆ ಗಣಿನಾಡಿನ ಅನ್ನದಾತರು ಮೆಣಸಿನಕಾಯಿ ಬೆಳೆಯನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಅತಿಯಾದ ಮಳೆಯಿಂದಾಗಿ ಗಿಡದಲ್ಲೇ ಮೆಣಸಿನಕಾಯಿ ಬೆಳೆ ಕೊಳೆ ಬಂದು ಹಾಳಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇದನ್ನ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೆಲವು ರೈತರು ಮೆಣಸಿನಕಾಯಿ ಬೆಳೆ ಮತ್ತೆ ಚಿಗುರೊಡೆಯಲು ಗ್ಲುಕೋಸ್ ಸಿಂಪಡಣೆ ಮಾಡುತ್ತಿದ್ದಾರೆ. ಅದರಲ್ಲೂ ಬಳ್ಳಾರಿ ತಾಲೂಕಿನ ಕೊಳಗಲ್ಲ ಗ್ರಾಮಸ್ಥರು ಬೆಳೆಗೆ ಗ್ಲೂಕೋಸ್ ಸಿಂಪಡಣೆ ಮಾಡುತ್ತಿದ್ದು, ಈ ಪದ್ದತಿಗೆ ಇದೀಗ ಬೇಡಿಕೆ ಹೆಚ್ಚಾಗಿದೆ.
ಗ್ಲುಕೋಸ್ ಪೌಡರ್, ಸಕ್ಕರೆ ಹಾಗೂ ಯೂರಿಯಾ ಮಿಶ್ರಣ ಮಾಡಿ ಬೆಳೆಗೆ ಸಿಂಪಡನೆ ಮಾಡಲಾಗುತ್ತಿದೆ. ಒಬ್ಬರ ಪ್ರಯೋಗ ನೋಡಿ ಇನ್ನೊಬ್ಬರು ಗ್ಲೂಕೋಸ್ ಸಿಂಪಡಣೆಗೆ ರೈತರು ಮುಂದಾಗಿದ್ದಾರೆ. ಅಕಾಲಿಕ ಮಳೆಯಿಂದಾದ ನಷ್ಟವನ್ನು ಭರಿಸಲು ಅನ್ನದಾತರು ಹರಸಾಹಸ ಪಡುತ್ತಿದ್ದಾರೆ.