ಮಳೆ ಅವಾಂತರಕ್ಕೆ ಮಗುಚಿ ಬಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್​; ತಪ್ಪಿದ ಅನಾಹುತ


ಚಿಕ್ಕೋಡಿ: ಜಿಲ್ಲೆಯ ಕೊಕಟನೂರ ಗ್ರಾಮ ಸಮೀಪದಲ್ಲಿ ಕಬ್ಬು ತುಂಬಿದ ಟ್ಯಾಕ್ಟರ್ ಒಂದು ನೋಡು ನೋಡುತ್ತಿದ್ದಂತೆ ಬಿದ್ದಿದ್ದು ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕಳೆದ ರಾತ್ರಿ ಮಳೆಯಾದ ಪರಿಣಾಮ ಈ ಅವಘಡ ಸಂಭವಿಸಿದ್ದು ಟ್ರ್ಯಾಕ್ಟರ್​ ಮುಗುಚಿ ಬೀಳುತ್ತಿರುವ ದೃಶ್ಯ ಮೋಬೈಲ್​ನಲ್ಲಿ ಸೆರೆಯಾಗಿದೆ. ಕಳದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿರೋದ್ರಿಂದ ಕಬ್ಬು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ:ಕನ್ನಡ ಸಿನಿರಂಗದಲ್ಲಿ ಯಾರೂ ಮಾಡದ ದಾಖಲೆ ಅಪ್ಪು ಮಾಡಿದ್ರು.. ಪುನೀತ್​ ಸಿನಿಮಾಗೆ ಬರ್ತಿತ್ತು ಜನ ಸಾಗರ

ಬೆಳೆದ ನಿಂತ ಬೆಳೆ ಇನ್ನೇನು ಕೈಗೆ ಬರುವುದರಲ್ಲಿ ವರಣರಾಯ ರೈತರ ಜೊತೆ ಆಟವಾಡುತ್ತಿದ್ದಾನೆ ಎಂದು ಅನ್ನದಾತ ಕಂಗಾಲಾಗಿದ್ದಾನೆ. ಜೊತೆಗೆ ಮಳೆಗೆ ಕಲವೊಂದು ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಕಬ್ಬಿನ ಲೋಡ್ ಹೊತ್ತು ಸಾಗುವ ವಾಹನಗಳಿಗೆ ಭಾರೀ ತೊಂದರೆ ಉಂಟು ಮಾಡಿವೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *