
ಮಳೆ ನಿಂತರೂ ಜನರ ಕಣ್ಣೀರು ನಿಂತಿಲ್ಲ; ಮನೆ ಕಳೆದುಕೊಂಡು ಗೋಳಾಟ, ಅನ್ನ ನೀರಿಗೂ ಪರದಾಟ
ಗದಗ ಜಿಲ್ಲೆಯ ಜನ್ರ ಜೀವನವೇ ಬುಡಮೇಲು ಆಗಿದೆ. ಅದ್ರಲ್ಲೂ ಗ್ರಾಮೀಣ ಭಾಗದ ಮಣ್ಣಿನ ಮನೆಯಲ್ಲಿ ವಾಸವಾಗಿರೋ ಬಡ ಜನ್ರ ಬದುಕು ದುಸ್ಥರವಾಗಿದೆ. ಹುಟ್ಟಿ, ಬೆಳೆದು ಬಾಳಿ ಬದುಕಿದ ಮನೆಗಳು ಕಣ್ಮುಂದೆಯೇ ಕ್ಷಣ ಕ್ಷಣಕ್ಕೂ ಕುಸಿದು ಬಿಳುತ್ತಿವೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಬಡ ಕುಟುಂಬಗಳ ಬದುಕು ಬೀದಿಗೆ ಬಂದಿವೆ.
ಗದಗ: ಅವು ಬಾಳಿ ಬದುಕಿದ ಮನೆಗಳು. ಅಲ್ಲೇ ಹುಟ್ಟಿ, ಬೆಳೆದ ಮನೆಗಳ ಸ್ಥಿತಿ ನೋಡಿ ಬಡ ಕುಟುಂಬಗಳು ಕಣ್ಣೀರು ಹಾಕ್ತಾಯಿವೆ. ಕಣ್ಮುಂದೆಯೇ ಕ್ಷಣ ಕ್ಷಣಕ್ಕೂ ಮಣ್ಣಿನ ಮನೆಗಳು ಕುಸಿಯುತ್ತಿವೆ. ಬಾಳಿ ಬದುಕಿದ ಮನೆಯೊಳಗೆ ಹೋಗಲು ಆ ಮನೆಯ ಸದಸ್ಯರೇ ಭಯ, ಆತಂಕ ಪಡುತ್ತಿದ್ದಾರೆ. ಪತಿ ಆಸ್ಪತ್ರೆಯಲ್ಲಿ ಮಲಗಿದ್ರೆ. ಇತ್ತು ಪತ್ನಿ ಮನೆ ಕಳೆದುಕೊಂಡು ಕಣ್ಣೀರು ಹಾಕ್ತಾಯಿದ್ದಾಳೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಿರಂತವಾಗಿ ಸುರಿಯುತ್ತಿರೋ ರಣಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ ನಿಮ್ಮ ಕೈ ಮುಗಿತೀನಿ ನಮಗೊಂದು ಸೂರು ಕೊಡಿಸಿ ಅಂತ ಅಜ್ಜಿಯ ಗೋಳಾಡಿದ್ದಾರೆ. ಮನೆಯಲ್ಲಿ ಮಲಗಲು ಜಾಗವಿಲ್ಲದೇ ಸೊಸೆ ಮೊಮ್ಮಕ್ಕಳ ಕರೆದುಕೊಂಡು ತವರು ಮನೆ ಸೇರಿದ್ದಾಳೆ ಅಂತ ಕಣ್ಣೀರು ಹಾಕಿದ್ದಾರೆ. ಇನ್ನು ಪಕ್ಕದ ಮನೆಯ ಮಹಿಳೆ ಕಥೆ ಇದಕ್ಕೂ ಭೀಕರವಾಗಿದೆ. ಮನೆ ಯಜಮಾನ ಆಸ್ಪತ್ರೆ ಸೇರಿದ್ದಾನೆ. ಇತ್ತ ನೋಡಿದ್ರೆ ಇಡೀ ಮನೆ ಕುಸಿದು ಬಿದ್ದಿದೆ. ಹೀಗಾಗಿ ದಿಕ್ಕುತೋಚದ ಮಹಿಳೆ ಕಣ್ಣೀರು ಹಾಕ್ತಾಯಿದ್ದಾಳೆ.