ಬೆಂಗಳೂರು: ರಾಜ್ಯದಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ಅಲ್ಲಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಸಾಕಷ್ಟು ಮಮನೆಗಳು ಧರೆಗುರುಳಿದ್ದು ನಿವಾಸಿಗಳು ವರುಣದೇವನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸದ್ಯ ಮಳೆಯ ಆರ್ಭಟ ನಿಂತರೆ ಸಾಕಪ್ಪಾ ಎನ್ನುವ ಮಟ್ಟಿಗೆ ಜನರು ಮಳೆರಾಯನಿಗೆ ಮೊರೆಯಿಡುತ್ತಿದ್ದಾರೆ.
ರಾಜ್ಯದ ಪ್ರಸುದ್ಧ ಮಠಗಳಲ್ಲಿ ಒಂದಾದ ಕೋಡಿಮಠದ ಡಾ.ಶ್ರೀ ಶಿವಾನಂದ ರಾಜೇಂದ್ರ ಸ್ವಾಮಿಜಿಗಳು ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿ ಭವಿಷ್ಯ ನುಡಿದಿದ್ದಾರೆ. ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಅಂತ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇನ್ನು ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. ಸದ್ಯ ಪ್ರಕೃತಿ ವಿಕೋಪ ಆಗಿದೆ. ಏನೂ ಮಾಡಲು ಆಗುವುದಿಲ್ಲ. ಇನ್ನೂ ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ.
ಕೋಡಿಶ್ರೀಗಳ ಭವಿಷ್ಯ ಇದೆ ಮೊದಲೇನಲ್ಲ ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಅವರು ಭವಿಷ್ಯವಾಣಿ ಹೇಳಿದ್ದಾರೆ. ಇತ್ತೀಚಿಗೆ ಅವರು ಕೊರೊನಾ ಸಾಂಕ್ರಾಮಿಕ ರೋಗದ ಕುರಿತು ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ:ಬೆಂಗಳೂರಲ್ಲಿ ಮಳೆ ಅವಾಂತರ; ಇದುವರೆಗೂ ದಾಖಲಾದ ಆ್ಯಕ್ಸಿಡೆಂಟ್ ಕೇಸ್ ಎಷ್ಟು ಗೊತ್ತಾ?