ಮಳೆ ಸಮಸ್ಯೆ ಬಗೆಹರಿಸದಿದ್ರೆ ನಾನು ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದು ಶಪಥ ಮಾಡಿದ ಆರ್.ಆರ್. ನಗರ ಕ್ಷೇತ್ರದ ಶಾಸಕ, ಸಚಿವ ಮುನಿರತ್ನ | If the rain issue is not resolved I will not stand for the next election says RR Nagar MLA and minister munirathna


ಮಳೆ ಸಮಸ್ಯೆ ಬಗೆಹರಿಸದಿದ್ರೆ ನಾನು ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದು ಶಪಥ ಮಾಡಿದ ಆರ್.ಆರ್. ನಗರ ಕ್ಷೇತ್ರದ ಶಾಸಕ, ಸಚಿವ ಮುನಿರತ್ನ

ಆರ್.ಆರ್. ನಗರ ಕ್ಷೇತ್ರದ ಶಾಸಕ, ಸಚಿವ ಮುನಿರತ್ನ

ಇಲ್ಲಿನ ಸಮಸ್ಯೆಗೆ ಫುಲ್ ಸ್ಟಾಪ್ ಇಡೋದು ನನ್ನ ಕೆಲಸ, ಕರ್ತವ್ಯ. ಇಲ್ಲವಾದ್ರೆ ನಾನು ಎಲೆಕ್ಷನ್ ನಲ್ಲಿ ಸ್ಪರ್ಧಿಸೊಲ್ಲ. ಆದಷ್ಟುಬೇಗ ಐಡಿಯಲ್ ಹೋಮ್ಸ್ ಲೇಔಟ್‌ ಸಮಸ್ಯೆ ಇತ್ಯರ್ಥವಾಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ.

ಬೆಂಗಳೂರು: ಬೆಂಗಳೂರಿನ ಕೆಲವೆಡೆ ವರುಣ(Bengaluru Rain) ಆರ್ಭಟ ಜೋರಾಗಿದ್ದು ಅಕ್ಷರಶಃ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೀಕರ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಮುಳುಗಿವೆ. ಸುಮಾರು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಸದ್ಯ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು ಆರ್.ಆರ್.ನಗರ ಕ್ಷೇತ್ರದ ಶಾಸಕ, ಸಚಿವ ಮುನಿರತ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಮಸ್ಯೆ ಬಗೆಹರಿಸದಿದ್ರೆ ನಾನು ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದಿದ್ದಾರೆ.

ಇಲ್ಲಿನ ಸಮಸ್ಯೆಗೆ ಫುಲ್ ಸ್ಟಾಪ್ ಇಡೋದು ನನ್ನ ಕೆಲಸ, ಕರ್ತವ್ಯ. ಇಲ್ಲವಾದ್ರೆ ನಾನು ಎಲೆಕ್ಷನ್ ನಲ್ಲಿ ಸ್ಪರ್ಧಿಸೊಲ್ಲ. ಆದಷ್ಟುಬೇಗ ಐಡಿಯಲ್ ಹೋಮ್ಸ್ ಲೇಔಟ್‌ ಸಮಸ್ಯೆ ಇತ್ಯರ್ಥವಾಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ. ಜನಪ್ರತಿನಿಧಿಗಳು ಇರೋದು ಜನರ ಸಮಸ್ಯೆ ಆಲಿಸೋಕೆ. ಜನರ ಸಮಸ್ಯೆ, ನೋವಿಗೆ ಸ್ಪಂಧಿಸದಿದ್ರೆ ಇದ್ದು ಏನ್ ಪ್ರಯೋಜನ? ಜನ ನಮ್ಮನ್ನ ಆಯ್ಕೆ ಮಾಡಿ ಕಳಿಸಿದ್ದಾರೆ, ಅವರ ಕಷ್ಟಕ್ಕೆ ಸ್ಪಂದಿಸಬೇಕು. ಜನರ ಕಷ್ಟಕ್ಕೆ ಸ್ಪಂದಿಸದಿದ್ರೆ ಜನಪ್ರತಿನಿದಿಗಳು ಬದುಕಿದ್ದೂ ಸತ್ತಂತೆ ಎಂದು Tv9ಗೆ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ನಾಯ್ಡು ಪ್ರತಿಕ್ರಿಯಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *