ಮಳೆ ಹಾನಿ ಪರಿಹಾರಕ್ಕೆ ₹418.72 ಕೋಟಿ ಬಿಡುಗಡೆ


ಬೆಂಗಳೂರು: ನೆರೆ ಸಂತ್ರಸ್ಥರಿಗೆ ಹಾಗೂ ಮನೆ, ಬೆಳೆ ಹಾನಿಯಾದವರ ನೆರವಿಗೆ ರಾಜ್ಯ ಸರ್ಕಾರ ಬಂದಿದ್ದು, ಮಳೆ ಹಾನಿ ಪರಿಹಾರವಾಗಿ 418 ಕೋಟಿ 72 ಲಕ್ಷದ 91 ಸಾವಿರ ರೂಪಾಯಿ ಘೋಷಿಸಿ ಸಿಎಂ ಆದೇಶ ಹೊರಡಿಸಿದ್ದಾರೆ.

ತುರ್ತು ಪರಿಹಾರದ ಬಳಕೆಗಾಗಿ ಎಸ್​ಡಿಆರ್​ಎಫ್​ ಹಾಗೂ ಎನ್​ಡಿಆರ್​​ಎಫ್​​​ ನಿಧಿಯಿಂದ ಈ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ನೆರೆ ಸಂತ್ರಸ್ಥರಿಗೆ ಮತ್ತು ಮನೆ ಹಾನಿಗಳಿಗೆ ತುರ್ತು ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.

ನಾಳೆ ಸಂಜೆ ರಾಜ್ಯ ಸಚಿವ ಸಂಪುಟ ಸಭೆ

ನಾಳೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಕಾಲಿಕ ಮಳೆಯಿಂದಾಗಿ ಉಂಟಾದ ಹಾನಿ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಳೆ ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಕಾಲಿಕ ಮಳೆಯ ಜೊತೆಗೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

News First Live Kannada


Leave a Reply

Your email address will not be published. Required fields are marked *