ಬೇಕಾಗುವ ಪದಾರ್ಥಗಳು..

 • ಸ್ವೀಟ್ ಕಾರ್ನ್- 2
 • ಜೋಳದ ಹಿಟ್ಟು-1 ಬಟ್ಟಲು
 • ಅಕ್ಕಿ ಹಿಟ್ಟು- 1 ಬಟ್ಟಲು
 • ಜೀರಿಗೆ ಪುಡಿ- 1 ಚಮಚ
 • ಮೆಣಸಿನ ಪುಡಿ – ಅರ್ಧ ಚಮಚ
 • ಬೆಳ್ಳುಳ್ಳು ಪುಡಿ- ಅರ್ಧ ಚಮಚ
 • ಆಂಚೂರ್ ಪೌಡರ್ – ಕಾಲು ಚಮಚ
 • ಉಪ್ಪು- ರುಚಿಗೆ ತಕ್ಕಷ್ಟು
 • ಎಣ್ಣೆ- ಕರಿಯಲು

ಮಾಡುವ ವಿಧಾನ…

 • ಮೊದಲಿಗೆ ಜೋಳವನ್ನು ಮಧ್ಯೆ ಕತ್ತರಿಸಿಕೊಂಡು ಟೂತ್ ಪಿಕ್ ಗಳ ಮೂಲಕ ಜೋಳವನ್ನು ಹಾಕಿಕೊಳ್ಳಬೇಕು.
 • ನಂತರ ಪಾತ್ರೆಯೊಂದಕ್ಕೆ ನೀರು ಹಾಗೂ ಜೋಳವನು ಟೂತ್ ಪಿಕ್ ಗಳ ಜೊತೆಗೆಯೇ ಬೇಯಿಸಿಕೊಳ್ಳಬೇಕು.
 • ಬಳಿಕ ಬೆಂದ ಜೋಳಕ್ಕೆ ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಜೀರಿಗೆ ಪುಡಿ, ಮೆಣಸಿನ ಪುಡಿ, ಬೆಳ್ಳುಳ್ಳಿ ಪುಡಿ, ಆಂಚೂರ್ ಪುಡಿ, ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು,
 • ಬಳಿಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಜೋಳವನ್ನು ಹಾಕಿ ಕೆಂಪಗೆ ಕರಿದರೆ, ರುಚಿಕರವಾದ ಮಸಾಲಾ ಕಾರ್ನ್ ಫ್ರೈಸ್ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More