ರಾಯಚೂರು: ದೇಶದಲ್ಲಿ ಕೊರೊನಾ ಮಹಾಮಾರಿಯ ರಣಕೇಕೆ ಜೋರಾಗಿದೆ. ಈ ಮಧ್ಯೆ ಮೇ 2ಕ್ಕೆ ಮಸ್ಕಿ ವಿಧಾನಸಭೆ ಉಪಚುನಾವಣೆ ಮತಎಣಿಕೆ ನಡೆಯಲಿದ್ದು, ಅಂದು ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಮತಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ 14 ದಿನಗಳ ಕಾಲ ಕ್ಲೋಸ್ ಡೌನ್ ಆದೇಶವಿದೆ. ಇದರ ನಡುವೆ, ಕಳೆದ ಏಪ್ರಿಲ್‌ 17ರಂದು ನಡೆದಿದ್ದ ಮಸ್ಕಿ ಬೈಎಲೆಕ್ಷನ್​ನ ಮತಎಣಿಕೆ ಕಾರ್ಯಕ್ಕೆ ಸಕಲ‌ ಸಿದ್ಧತೆ ನಡೆಯುತ್ತಿದೆ. ಕೊರೊನಾ ಸುನಾಮಿಯ ತೀವ್ರಗತಿ ಹರಡುವಿಕೆ ತಡೆಯುವ ಸಲುವಾಗಿ, ಮೇ 2ರಂದು ಮತಎಣಿಕೆ ಕೇಂದ್ರಕ್ಕೆ ಬರುವವರಿಗೆ  RTPCR ಪರೀಕ್ಷಾ ವರದಿ ಕಡ್ಡಾಯ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಇನ್ನು ಕೇಂದ್ರ ಚುನಾವಣಾ ಆಯೋಗ ಕೂಡ ಈಗಾಗಲೇ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳಲಿರುವ ಮೇ 2 ಹಾಗೂ ಅದರ ನಂತರ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ನಿಷೇಧ ವಿಧಿಸಿದೆ.

 

 

The post ಮಸ್ಕಿ ಉಪಚುನಾವಣೆ ಫಲಿತಾಂಶ: ಕೊರೊನಾ ನೆಗೆಟಿವ್ ಇದ್ದವರಿಗೆ ಮಾತ್ರ ಮತಎಣಿಕೆ ಕೇಂದ್ರಕ್ಕೆ ಪ್ರವೇಶ appeared first on News First Kannada.

Source: newsfirstlive.com

Source link