ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ ಇಂದು ರಾಜ್ಯದ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಎರಡನೇ ಸಭೆ ಸೇರಿದ್ದಾರೆ. ವಿಧಾನಸೌಧದಲ್ಲಿ ನಡೆಯುತ್ತಿರುವ ಈ ಮಹತ್ವ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ.

ಸಭೆಯಲ್ಲಿ ಚರ್ಚೆಯಾಗಲಿರುವ ವಿಚಾರಗಳು:

1. ಆರ್‌ಟಿಪಿಸಿಆರ್ ಪರೀಕ್ಷೆಗೆ ಬೆಲೆ ನಿಗದಿ‌. ಸರ್ಕಾರಿ ಆಸ್ಪತ್ರೆಯಲ್ಲಿ ₹500 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ₹800 ನಿಗದಿ. ಇದರ ಜೊತೆಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಗೆ ನಿಗದಿಯಾಗಬೇಕಾದ ಹಣದ ಕುರಿತು ಚರ್ಚೆ.

2. 18 ವರ್ಷದಿಂದ 44 ವರ್ಷದವರೆಗೆ 3.26 ಕೋಟಿ ಲಸಿಕೆ ಅವಶ್ಯಕತೆ ಇದೆ. ಸೀರಂ ಇನ್ಸ್ಟಿಟ್ಯೂಟ್‌ನಿಂದ ಬರುವ ಲಸಿಕೆಗೆ ದರ ನಿಗದಿಪಡಿಸುವುದು. ಕೋವಿಶೀಲ್ಡ್ ಪ್ರತಿ ಡೋಸ್‌ಗೆ ₹300, ಕೋವ್ಯಾಕ್ಸಿನ್ ಪ್ರತಿ ಡೋಸ್‌ಗೆ ₹400 ನಿಗದಿಪಡಿಸುವುದು.

3. ಔಷಧಿಗಳ ಬೇಡಿಕೆಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ‌.

4. ಕೋವಿಡ್-19 ರೋಗಿಗಳಿಗೆ ಅವಶ್ಯವಿರುವ ವೈದ್ಯಕೀಯ ಆಕ್ಸಿಜನ್ ಜನರೇಟರ್‌ ಅನ್ನು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ 18 ಸಂಸ್ಥೆಗಳಿಗೆ ₹62.70 ಕೋಟಿ ವೆಚ್ಚದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ.

5. ಕೋವಿಡ್-19 ಕಾಲ್ ಸೆಂಟರ್ 1912 ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಾಡುವುದನ್ನು ಬಿಟ್ಟು ಒಂದೇ ಸೂರಿನಡಿಯಲ್ಲಿ ತರುವುದು.

6. ಬೆಡ್‌ಗಳ ನಿರ್ವಹಣೆ ಕಡ್ಡಾಯವಾಗಿ ಪ್ರದರ್ಶಿಸುವ ಬಗ್ಗೆ ಉಸ್ತುವಾರಿ ಹರ್ಷಗುಪ್ತಾಗೆ ವಹಿಸುವುದು.

7. ಔಷಧ ಮತ್ತು ಪರಿಕರಗಳ ಬೇಡಿಕೆ, ಸಂಗ್ರಹಣೆ RAT kit ಮುಖಾಂತರ ಪರೀಕ್ಷೆ ಹೆಚ್ಚಳ.

8. ಹೋಂ ಐಸೋಲೇಷನ್‌ನಲ್ಲಿ ಇರುವ ಸೋಂಕಿತರಿಗೆ ಮೆಡಿಕಲ್ ಕಿಟ್ ಒದಗಿಸುವುದು ಕಡ್ಡಾಯ.

9.‌ ಖಾಸಗಿ ಆಸ್ಪತ್ರೆಯ ವೆಂಟಿಲೇಟರ್‌ಗಳನ್ನು ಎಂಎಸ್​ ರಾಮಯ್ಯ ಮೆಡಿಕಲ್ ಕಾಲೇಜು, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು, ಡಾ.ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈಟ್‌ಫೀಲ್ಡ್, ಸುಗುಣಾ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜು, ಪೀಪಲ್ ಟ್ರೀ ಆಸ್ಪತ್ರೆ, ಮೀನಾಕ್ಷಿ ಆಸ್ಪತ್ರೆ, ದಯಾನಂದ ಸಾಗರ್ ವೈದ್ಯಕೀಯ ಕಾಲೇಜು, ಎಂ.ವಿ.ಜೆ ವೈದ್ಯಕೀಯ ಕಾಲೇಜು ಹೊಸಕೋಟೆ, ಆಕಾಶ್ ವೈದ್ಯಕೀಯ ಕಾಲೇಜು ದೇವನಹಳ್ಳಿ, ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಮಂಡ್ಯ, ನಾರಾಯಣ ಆಸ್ಪತ್ರೆಗಳಿಗೆ ನೀಡುವುದು. ಮುಂದಿನ 6 ತಿಂಗಳು ಶುಲ್ಕವಿಲ್ಲದಂತೆ ವಿಸ್ತರಿಸಲು ಸಭೆಯಲ್ಲಿ ಅನುಮೋದನೆ.

10. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ, interns ಹಾಗೂ ಇತರೆ ಆರೋಗ್ಯ ವಿಜ್ಞಾನಗಳ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆ ಬಳಸಿಕೊಳ್ಳುವ ಬಗ್ಗೆ ಪರಿಶೀಲನೆ.

11. ರೆಮಿಡಿಸಿವಿರ್ ಕೊರತೆ ಬಗ್ಗೆ ಚರ್ಚೆ.

12. ಆಕ್ಸಿಜನ್ ಹಾಗೂ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಗೆ ಇಂದಿನ ಸಭೆಯಲ್ಲಿ ನಿರ್ಧಾರ.

The post ಮಹತ್ವದ ಟಾಸ್ಕ್​ಫೋರ್ಸ್​ ಸಭೆ: ಕೊರೊನಾ ಟೆಸ್ಟ್, ವ್ಯಾಕ್ಸಿನ್ ದರ ಇಳಿಕೆಯಾಗುತ್ತಾ..? appeared first on News First Kannada.

Source: newsfirstlive.com

Source link