ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟಿಬೆಟಿಯನ್​ ಗುರು ದಲಾಯಿ ಲಾಮಾ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.  ಜನ್ಮದಿನ ಎಲ್ಲರೂ ಶುಭ ಕೋರುತ್ತಾರೆ.. ಇದ್ರಲ್ಲೇನು ವಿಶೇಷ? ಮತ್ತು ಯಾಕೆ ಈ ಕರೆ ಇಷ್ಟು ಮಹತ್ವ ಪಡೆದುಕೊಂಡಿದೆ? ಅಂತ ನೋಡಿದ್ರೆ ಸಾಕಷ್ಟು ಆಯಾಮಗಳು ತೆರೆದುಕೊಳ್ಳುತ್ತವೆ.

ಇಂದು ದಲಾಯಿ ಲಾಮಾ ಅವರ 86ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದಲಾಯಿ ಲಾಮಾ ಅವರಿಗೆ ಸ್ವತಃ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಟ್ವೀಟ್ ಮಾಡಿ ಅವರೇ ಸ್ವತಃ ಮಾಹಿತಿ ನೀಡಿದ್ದು, ದಲಾಯಿ ಲಾಮಾ ಅವರಿಗೆ ಕರೆ ಮಾಸಿ ಶುಭಾಶಯ ಕೋರಿದ್ದೇನೆ. ಅವರಿಗೆ ದೀರ್ಘಾಯಸ್ಸು ಮತ್ತು ಉತ್ತಮ ಆರೋಗ್ಯ ಸಿಗಲೆಂದು ಆಶಿಸುವೆ ಎಂದು ಮೋದಿ ಹೇಳಿದ್ದಾರೆ. ಆದ್ರೆ ಈ ಬೆಳವಣಿಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೌದು, ಇದು ಮೇಲ್ಮೋಟಕ್ಕೆ ಧರ್ಮಗುರುವಿಗೆ ಕರೆ ಮಾಡಿದಂತೆ ಅನಿಸಿದ್ರೂ, ಅದರ ಹಿಂದಿನ ಲೆಕ್ಕಾಚಾರ ಬೇರೆಯೇ ಇದ್ದಂತೆ ಇದೆ. ಯಾಕಂದ್ರೆ ಕಳೆದ ವರ್ಷ ಗಲ್ವಾನ್​​ನಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡುವೆ ಕಲವೇ ನಡೆದಿತ್ತು.. ಜೊತೆಗೆ, ಲಡಾಖ್ ಗಡಿಯಲ್ಲಿ ಸಾಕಷ್ಟು ಬಿಸಿಯಾದ ವಾತಾವರಣ ಕೂಡ ಇತ್ತು. ಅಂಥ ಸಂದರ್ಭದಲ್ಲೂ ಪ್ರಧಾನಿ ಮೋದಿ ದಲಾಯಿ ಲಾಮಾ ಅವರಿಗೆ ಕರೆ ಮಾಡಿ ಶುಭ ಕೋರಿರಲಿಲ್ಲ. ಆದ್ರೆ ಈ ಬಾರಿ ಯಾಕೆ ಶುಭ ಕೊರಿದ್ದಲ್ಲೇ ಅದನ್ನ ಸ್ವತಃ ಟ್ವೀಟ್ ಮಾಡಿದ್ರು? ಅನ್ನೋ ಪ್ರಶ್ನೆ ಮೂಡುತ್ತೆ.

ಒಂದು ಕಡೆದ ಭಾರತದ ಸೀಕ್ರೆಟ್ ವಾರಿಯರ್ಸ್ ಆಗಿ ಕಳೆದ ವರ್ಷ ಭಾರತದಲ್ಲಿನ ಟಿಬೇಟಿನ ಸೈನಿಕರು ಕಾರ್ಯ ನಿರ್ವಹಿಸ್ತಾ ಇರೋದನ್ನ ಮತ್ತು ಕೈಲಾಶ್ ರೇಂಜ್​ನಲ್ಲಿ ಚೀನಿಯರಿಗೆ ಮಣ್ಣು ಮುಕ್ಕಿಸಿದ್ದನ್ನ ಮೊದಲ ಬಾರಿಗೆ ಕೇಂದ್ರ ಸರ್ಕಾರವೇ ಘೋಶಿಸಿತ್ತು. ಇದರ ಬೆನ್ನಲ್ಲೇ ಸದ್ಯ ಚೀನಾ, ಟಿಬೇಟಿನಲ್ಲಿರುವ ನಿರುದ್ಯೋಗಿ ಯುವಕರಿಗೆ ಟ್ರೇನಿಂಗ್ ಕೊಟ್ಟು ಭಾರತದ ವಿರುದ್ಧ ಹೋರಾಡಲು ಸಿದ್ಧ ಪಡಿಸ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಚೀನಿ ಸೈನಿಕರಿಗೆ ಹಿಮಾಲಯ ಹಾಗೂ ಲಡಾಖ್​ನ ಪರ್ವತ ಶ್ರೇಣಿಯಲ್ಲಿ ಇರಲು ಕೂಡ ಸಾಧ್ಯವಾಗುತ್ತಿಲ್ಲ. ಅವರ ಆರೋಗ್ಯ ಪದೇ-ಪದೆ ಕೈ ಕೊಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಟಿಬೇಟಿಯನ್ ಯುವಕರನ್ನ ಟಾರ್ಗೆಟ್ ಮಾಡಿ ಅವರನ್ನು ಸೇನೆಗೆ ಸೇರಿಸಿಕೊಳ್ಳದೇ.. ಹೋರಾಟಗಾರರನ್ನಾಗಿ ಬಳಸಿಕೊಳ್ಳಲು ಚೀನಾ ಶುರು ಮಾಡಿದೆ. ಅಷ್ಟೇ ಅಲ್ಲ, ಕಮ್ಯುನಿಸ್ಟ್ ರಾಷ್ಟ್ರವಾಗಿದ್ದರೂ, ಚೀನಿ ಸೇನೆ ಟಿಬೇಟಿಯನ್ ಯುವಕರಿಗೆ ಬೌದ್ಧ ಬಸದಿಗೆ ಕರೆದುಕೊಂಡು ಹೋಗಿ ಅಲ್ಲಿನ ಧರ್ಮಗುರುಗಳಿಂದ ಶಪಥ ಕೂಡ ಮಾಡಿಸಿದೆ. ಹೀಗೆ ಚೀನಾ ತನ್ನದೇ ಆದ ಲೆಕ್ಕಾಚಾರವನ್ನ ಹಾಕಿಕೊಂಡು ಭಾರತವನ್ನ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದರ ಬೆನ್ನಲ್ಲೇ ಮೋದಿ, ಒಂದು ಹೆಜ್ಜೆ ಮುಂದೆ ಹೊಗಿ ದಲಾಯಿ ಲಾಮಾ ಅವರಿಗೆ ಶುಭಾಶಯ ಕೋರಿದ್ದು ಮಾತ್ರವಲ್ಲ, ಅದನ್ನ ಟ್ವೀಟ್ ಮಾಡುವುದರ ಮೂಲಕ ಬಹಿರಂಗವಾಗಿಯೇ ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ. ಈ ಮೂಲಕ ಸೂಚ್ಯವಾಗಿ ಸಾಕಷ್ಟು ಸಂದೇಶವನ್ನ ಮೋದಿ ರವಾನಿಸಿದ್ದಾರೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಮಹತ್ವದ ಬೆಳವಣಿಗೆ.. ಟಿಬೇಟಿಯನ್ನರಿಗೆ ಚೀನಾ ಗಾಳ ಬೆನ್ನಲ್ಲೇ ಪ್ರಧಾನಿ ಮೋದಿ ಏನು ಮಾಡಿದ್ರು ಗೊತ್ತಾ? appeared first on News First Kannada.

Source: newsfirstlive.com

Source link