ಚಾಮರಾಜನಗರ: ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಗುಡ್ಡ ಕುಸಿತ ಕಂಡಿದ್ದು ಬೃಹತ್ ಬಂಡೆಗಳು ರಸ್ತೆಗುರುಳಿವೆ.
ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇತ್ತೀಚಿಗೆ ಪದೇ ಪದೇ ಭೂ ಕುಸಿತ ಉಂಟಾಗುತ್ತಿದ್ದು ವಾಹನ ಸವಾರರಲ್ಲಿ ಆತಂಕ ಸೃಷ್ಟಿ ಮಾಡಿದೆ. ನಿನ್ನೆ ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು ವಾಹನ ಸಂಚಾರವಿಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಇನ್ನು ಕಳೆದ ಒಂದು ವಾರದಿಂದಲೂ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಅಲ್ಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಭೂಮಿ ಕುಸಿದಿದೆ. 2019 ರಲ್ಲೂ ಮಳೆಯಿಂದ ಸುಮಾರು 10 ಕಡೆ ಭೂ ಕುಸಿತ ಉಂಟಾಗಿತ್ತು ಎನ್ನಲಾಗಿದೆ. ಕಳೆದ ತಿಂಗಳು ಬೆಟ್ಟ ಕುಸಿದ ಪರಿಣಾಮ ಭತ್ತದ ಯಂತ್ರ ಪಲ್ಟಿ ಹೊಡೆದು ಅವಾಂತರ ಸೃಷ್ಟಿಸಿತ್ತು
The post ಮಹದೇಶ್ವರ ಬೆಟ್ಟದಲ್ಲಿ ಮತ್ತೇ ಭೂ ಕುಸಿತ..ರಸ್ತೆಗುರುಳಿದ ಬೃಹತ್ ಬಂಡೆಗಳು appeared first on News First Kannada.