ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಜೀಪ್​ ಒಂದರ ಸ್ಟೇರಿಂಗ್ ಕಟ್ ಆದ ಪರಿಣಾಮ ಜೀಪ್ 30 ಅಡಿ ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ.

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು 12 ಮಂದಿ ಗಾಯಗೊಂಡಿದ್ದಾರೆ. ತುಳಸೀಕೆರೆಯ ಗ್ರಾಮಸ್ಥರು ಇಂಡಿ ಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತುಳಸೀಕೆರೆಯ ವೀರಣ್ಣ (75)  ಮೃತ ವ್ಯಕ್ತಿ. ಗಾಯಾಳುಗಳನ್ನು ತಮಿಳುನಾಡಿನ ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

The post ಮಹದೇಶ್ವರ ಬೆಟ್ಟದಲ್ಲಿ 30 ಅಡಿ ಆಳಕ್ಕೆ ಬಿದ್ದ ಜೀಪ್.. ಓರ್ವ ಸಾವು.. ಹಲವರ ಸ್ಥಿತಿ ಗಂಭೀರ appeared first on News First Kannada.

Source: newsfirstlive.com

Source link