ಗದಗ: ಮಹದಾಯಿ ಮತ್ತು ಕಳಸಾ ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ನಡೆಯುತ್ತಿರುವ ರೈತರ ಹೋರಾಟವೀಗ 6 ವರ್ಷಗಳನ್ನು ಪೂರೈಸಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಹೀಗಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಹದಾಯಿ ಹೋರಾಟಗಾರರು ಮತ್ತೊಮ್ಮೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಸಜ್ಜಾಗಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ, ಮಹದಾಯಿ ಯೋಜನೆ ವಿಳಂಬ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ ಮಾಡುತ್ತೇವೆ. ಇದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುತ್ತೇವೆ ಎಂದರು.

ಹೀಗೆ ಮುಂದುವರಿದ ಅವರು, ರಾಜ್ಯದಲ್ಲಿ ಮೂರು ಪಕ್ಷಗಳಿಂದ ಈ ಬಗ್ಗೆ ಬೆಳಕು ಚೆಲ್ಲುವಂತ ಕೆಲಸ ಆಗಿಲ್ಲ. ಇವರಿಂದ ಏನೂ ಆಗೋದುನೂ ಬೇಡ, ಅವರ ಅವಶ್ಯಕತೆ ನಮಗಿಲ್ಲ. ಇಂದು ನಾವು ಐದು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದೇವೆ. ಐದು ಪ್ರಮುಖ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಒಂದು ಎಂದು ತಿಳಿಸಿದರು.

ಇದನ್ನೂ ಓದಿ: ಮಹಾದಾಯಿ ನೀರು ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಗೋವಾ ಸರ್ಕಾರ

ಮಹದಾಹಿ ಹೋರಾಟದಲ್ಲಿ ಮೃತಪಟ್ಟ 11 ಜನರಿಗೆ ಪರಿಹಾರ ಒದಗಿಸುವ ಕುರಿತು ಕಾನೂನು ಹೋರಾಟ ರೂಪಿಸಲಿದ್ದೇವೆ. ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶಗಳ ಕಾಲುವೆಗಳ ಕಳಪೆ ಕಾಮಗಾರಿ ಕುರಿತು ಪ್ರತಿಭಟಿಸಲಿದ್ದೇವೆ. ಸುಮಾರು 1200 ಕೋಟಿ. ರೂ ವೆಚ್ಚದ ಬಲದಂಡೆ ಕಾಲುವೆ ಕಾಮಗಾರಿ ಮಾಹಿತಿ ನೀಡಬೇಕು, ಇದಕ್ಕಾಗಿ ಕಳಸಾ ಹೋರಾಟಗಾರರಿಗೆ ರಾಜ್ಯಪಾಲರನ್ನ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

The post ಮಹಾದಾಯಿ ಯೋಜನೆ ವಿಳಂಬ ಪ್ರಶ್ನೆ; ಸುಪ್ರೀಂ ಮೊರೆ ಹೋಗಲು ರೈತರ ನಿರ್ಧಾರ appeared first on News First Kannada.

Source: newsfirstlive.com

Source link