ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಸಿರೀಯಲ್​ನಲ್ಲಿ ಟ್ವಿಸ್ಟ್

ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಸಿರೀಯಲ್​ನಲ್ಲಿ ಟ್ವಿಸ್ಟ್

ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಧಾರಾವಾಹಿ ಮಾಡಿರೋ ಇಂಪ್ಯಾಕ್ಟ್‌ ಅಷ್ಟಿಷ್ಟಲ್ಲ. ಶಿಕ್ಷಣದ ಬಗ್ಗೆ ಇರಬಹುದು, ಜಾತಿ ವ್ಯವಸ್ಥೆ ಬಗ್ಗೆ ಇರಬಹುದು ಈ ಧಾರಾವಾಹಿ ಚೆಲ್ಲಿರೋ ಬೆಳಕು ಮೆಚ್ಚುಗೆಗೆ ಅರ್ಹ.

ಇದಿಷ್ಟೇ ಅಲ್ಲ, ಈ ಧಾರಾವಾಹಿಯಲ್ಲಿ ಬಾಲ ಭೀಮನ ಪಾತ್ರ ಮಾಡಿರೋ ಬಾಲನಟ ಆಯುಧ್‌ನ ಅಭಿನಯವನ್ನ ಇಡೀ ದೇಶವೇ ಮೆಚ್ಚಿದೆ. ಈ ಧಾರವಾಹಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯೋಕೇ ಕಾರಣವೇ ಆಯುಧ್‌ ನಟನೆ.

ಅಂದ್ಹಾಗೇ, ಹೊಸ ವಿಷ್ಯ ಏನಂದ್ರೆ, ಸದ್ಯದಲ್ಲಿಯೇ ಭೀಮ ಪಾತ್ರ ಮಾಡಿರೋ ಆಯುಧ್‌ ಕಿರುತೆರೆಯಲ್ಲಿ ಕಾಣಿಸಿಕೊಳ್ಳೋದಿಲ್ಲ. ಹಾಗಂತಾ ಅವರು ಸೀರಿಯಲ್‌ ತ್ಯಜಿಸಿಲ್ಲ. ಬದಲಿಗೆ ಕತೆಯಲ್ಲಿ ಬದಲಾವಣೆಯಾಗಿದೆ. ಅಂಬೇಡ್ಕರ್‌ ಪ್ರೌಢಾವಸ್ಥೆಯ ಕಥೆ ಶುರುವಾಗಲಿದ್ದು, ಬಾಲ ಭೀಮನ ಎಪಿಸೋಡ್ ಮುಕ್ತಾಯವಾಗ್ಲಿದೆ. ಹಾಗಾದ್ರೆ, ಪ್ರೌಢಾವಸ್ಥೆಯ ಅಂಬೇಡ್ಕರ್ ಪಾತ್ರ ಮಾಡ್ತಿರೋದು ಯಾರು ಅಂದ್ರೆ…

ನಟ ಅಥರ್ವ ಕಾರ್ವೆ ಯುವ ಭೀಮರಾವ್ ಅಂಬೇಡ್ಕರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ಭಾಗಿಯಾಗಿರುವ ಕತೆ ಜುಲೈ 20 ರಿಂದ ಹೊಸ ಟ್ವಿಸ್ಟ್​ಗಳೊಂದಿಗೆ ಪ್ರಸಾರವಾಗಲಿದೆ.

ಅಥರ್ವ ಯಾರು ಎಂಬ ಪ್ರಶ್ನೆ ಮೂಡಬಹುದು. ಇವರು ಮರಾಠಿ ಭಾಷೆಯಲ್ಲಿ ಚಿರಪರಿಚಿತರು. ಈ ಹಿಂದೆ ಕೂಡಾ  ಕೆಲವು ಹಿಂದಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೇ, ಇದು ಹಿಂದಿ ಸೀರಿಯಲ್‌ನಲ್ಲಿ ಜುಲೈ 20ರಿಂದ ಪ್ರಸಾರವಾಗಲಿದೆ. ಕನ್ನಡದಲ್ಲಿ ಸ್ವಲ್ಪ ದಿನಗಳ ವರೆಗೆ ಪ್ರಸಾರವಾಗಲಿದೆ. ಆ ನಂತರ ಈ ಟ್ರ್ಯಾಕ್ ಆರಂಭವಾಗಲಿದೆ. ಸದ್ಯ ಹಿಂದಿಯಲ್ಲಿ ಜುಲೈ 20ರಿಂದ ಹೊಸ ಕಥೆ ಪ್ರಸಾರವಾಗಲಿದೆ.

The post ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್ ಸಿರೀಯಲ್​ನಲ್ಲಿ ಟ್ವಿಸ್ಟ್ appeared first on News First Kannada.

Source: newsfirstlive.com

Source link