ಚೀನಾದಲ್ಲಿ 1,000 ವರ್ಷಗಳಲ್ಲೇ ಬೀಳದ ಮಹಾಮಳೆ ಸುರಿಯುತ್ತಿದ್ದು ಇಡೀ ದೇಶ ಅಕ್ಷರಶಃ ನಲುಗಿಹೋಗಿದೆ. ಚೀನಾದ ಪ್ರಮುಖ ನಗರಗಳ ಮಧ್ಯೆಯೇ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು ಎಲ್ಲೆಲ್ಲೂ ಸಾವು ನೋವಿನ ದೃಶ್ಯಗಳು ಕಂಡುಬರುತ್ತಿವೆ.

ಭಾರೀ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹದಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು 12 ಲಕ್ಷ ಮಂದಿ ಮನೆಗಳನ್ನ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇನ್ನು ಜನರ ರಕ್ಷಣೆಗಾಗಿ ಅಲ್ಲಿನ ಸರ್ಕಾರ 17,000 ಅಗ್ನಿಶಾಮಕ ಸಿಬ್ಬಂದಿಯನ್ನ ನಿಯೋಜಿಸಿದೆ. ಅಲ್ಲದೇ ಸ್ಥಳೀಯರೂ ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಇತ್ತೀಚೆಗೆ ಭಾದಿಸಿದ ಕೊರೊನಾದಿಂದಾಗಿ ಈಗಷ್ಟೇ ಚೀನಾ ಚೇತರಿಸಿಕೊಳ್ಳುತ್ತಿತ್ತು.. ಅಲ್ಲದೇ ಆರ್ಥಿಕತೆ ಕುಸಿತದಿಂದ ಚೇತರಿಸಿಕೊಳ್ಳುತ್ತಿದ್ದ ಚೀನಾಗೆ ಮಹಾಮಳೆ ದೊಡ್ಡಪೆಟ್ಟನ್ನೇ ನೀಡಿದೆ. ಚೀನಾದ ದೊಡ್ಡ ದೊಡ್ಡ ನಗರಗಳಲ್ಲಿ ಬಸ್, ರೈಲ್ವೆ, ವಿಮಾನ ಸೇರಿದಂತೆ ಬಹುತೇಕ ಸಾರಿಗೆ ಸಂಪರ್ಕ ಕಡಿತವಾಗಿದ್ದು.. ವಿದ್ಯುತ್ ವ್ಯತ್ಯಯವೂ ಎದುರಾಗಿದೆ.

The post ಮಹಾಮಳೆಗೆ ಮುಳುಗಿದ ಚೀನಾ; ಬೆಚ್ಚಿಬೀಳಿಸುತ್ತವೆ ದುರಂತದ ಈ ದೃಶ್ಯಗಳು appeared first on News First Kannada.

Source: newsfirstlive.com

Source link