ಬೆಂಗಳೂರು: ಕೊರೊನಾ ಎರಡನೇ ಅಲೆ ಅಬ್ಬರದಿಂದ ಜನರು ತತ್ತರಿಸಿದ್ದಾರೆ. ದೇಶದಾದ್ಯಂತ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಆತಂಕ ಉಂಟು ಮಾಡಿದೆ.

ಕಳೆದ ಏಳು ದಿನಗಳ ಕರ್ನಾಟಕದ ಸಾವಿನ ಪ್ರಕರಣಗಳನ್ನ ನೋಡಿದಾಗ, ಕೊರೊನಾ ಮರಣ ಪ್ರಮಾಣ(ಫೆಟಾಲಿಟಿ ರೇಟ್)ನಲ್ಲಿ ರಾಜ್ಯದಲ್ಲೇ ಹಾವೇರಿ ಮೊದಲ ಸ್ಥಾನದಲ್ಲಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ನಿತ್ಯ ಸಾವಿನ ಪ್ರಮಾಣ ಏರಿಕೆಯಾಗ್ತಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ರಾಜಧಾನಿ ಬೆಂಗಳೂರು ಇದೆ.

ಒಂದು ವಾರದ ಸಾವಿನ ಪ್ರಮಾಣದ ಅಂಕಿಅಂಶ ಹೀಗಿದೆ
ಜಿಲ್ಲೆ – ಸಾವಿನ ಪ್ರಮಾಣ
1. ಹಾವೇರಿ – ಶೇಕಡ 3.14
2. ಬೀದರ್ – ಶೇಕಡ 2.15
3. ರಾಮನಗರ – ಶೇಕಡ 1.81
4. ಬೆಂಗಳೂರು‌ ನಗರ – ಶೇಕಡ 1.48
5. ಶಿವಮೊಗ್ಗ – ಶೇಕಡ 1.48
6. ವಿಜಯಪುರ – ಶೇಕಡ 1.40
7. ಉತ್ತರ ಕನ್ನಡ – ಶೇಕಡ 1.38
8. ಚಾಮರಾಜನಗರ -ಶೇಕಡ 1.31
9. ಕಲ್ಬುರ್ಗಿ – ಶೇಕಡ 1.28
10.ಕೊಡಗು – ಶೇಕಡ 1.26
11. ಬಳ್ಳಾರಿ -ಶೇಕಡ 1.22

  • ಇನ್ನು ಇಡೀ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
  • ಈವರೆಗೆ ಕರ್ನಾಟಕದಲ್ಲಿ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ  21,434.
  • ಮಹಾರಾಷ್ಟ್ರದಲ್ಲಿ 79,552 ಮಂದಿ ಕೊರೊನಾಗೆ ಬಲಿಯಾಗಿದ್ದು ನಂಬರ್ ಒನ್ ಸ್ಥಾನದಲ್ಲಿದೆ.
  • ಇನ್ನು ದೆಹಲಿ ಮೂರನೇ ಸ್ಥಾನದಲ್ಲಿದ್ದು, 20907 ಮಂದಿ ಮೃತಪಟ್ಟಿದ್ದಾರೆ.
  • ನಾಲ್ಕನೇ ಸ್ಥಾನದಲ್ಲಿ ತಮಿಳುನಾಡು ಇದ್ದು, 17056 ಮಂದಿ ಮೃತಪಟ್ಟಿದ್ದಾರೆ.
  • ಉತ್ತರ ಪ್ರದೇಶ 5ನೇ ಸ್ಥಾನದಲ್ಲಿದ್ದು, 16957 ಮಂದಿ ಮೃತಪಟ್ಟಿದ್ದಾರೆ.

The post ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರ ಸಾವು, 2ನೇ ಸ್ಥಾನದಲ್ಲಿ ಕರ್ನಾಟಕ appeared first on News First Kannada.

Source: newsfirstlive.com

Source link