ಮಹಾರಾಷ್ಟ್ರದಲ್ಲಿ ಕೊವಿಡ್ ಸೋಂಕು ಮತ್ತು ಸಾವಿನ ಸಂಖ್ಯೆ ತಗ್ಗಿದೆ, ಆದರೆ ಲಸಿಕೆ ನೀಡುವ ಪ್ರಮಾಣವು ಕುಂಠಿತಗೊಂಡಿದೆ! | Covid cases and deaths declining in Maharashtra, however vaccination drive too has slowed down


ಮಹಾರಾಷ್ಟ್ರದಲ್ಲಿ ಕೊವಿಡ್ ಸೋಂಕು ಮತ್ತು ಸಾವಿನ ಸಂಖ್ಯೆ ತಗ್ಗಿದೆ, ಆದರೆ ಲಸಿಕೆ ನೀಡುವ ಪ್ರಮಾಣವು ಕುಂಠಿತಗೊಂಡಿದೆ!

ಲಸಿಕಾ ಅಭಿಯಾನ

ಸಾರ್ವಜನಿಕ ಸಾರಿಗೆ, ಶಾಲಾ-ಕಾಲೇಜುಗಳು ಓಪನ್ ಆಗಿವೆ, ಪಬ್ಲಿಕ್ ಪ್ರದೇಶಗಳಲ್ಲಿ ಜನಜಂಗುಳಿ ಕಾಣುತ್ತಿದೆ. ಲಸಿಕೆ ನಿಡಿಕೆ ಪ್ರಮಾಣ ಕುಂಠಿತಗೊಂಡಿರುವುದು ಸರ್ಕಾರ ಮಟ್ಟದಲ್ಲಿ ಯೋಚನೆಗಿಟ್ಟುಕೊಂಡಿದೆ. ಮೂರನೇ ಅಲೆಯ ಭೀತಿ ತಲೆದೋರುವ ಸಾಧ್ಯತೆ ಬಗ್ಗೆ ಟಾಸ್ಕ್ ಫೋರ್ಸ್ ಎಚ್ಚರಿಸುತ್ತಿದೆ. ಆದರೆ ಗಮನಿಸಬೇಕಿರುವ ಸಂಗತಿಯೆಂದರೆ, ಇದೆಲ್ಲದರ ಹೊರತಾಗಿಯೂ ಮಹಾರಾಷ್ಟ್ರನಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವುಗಳ ಸಂಖ್ಯೆ ತೀವ್ರವಾಗಿ ಇಳಿಮುಖಗೊಂಡಿದೆ.

ಜನಸಂಖ್ಯೆಯಲ್ಲಿ ವ್ಯಾಪಕವಾಗಿ ಹರಡಿದ ಸೋಂಕು ಮತ್ತು ಲಸಿಕಾ ಆಭಿಯಾನದ ಒಟ್ಟಾರೆ ವ್ಯಾಪ್ತಿ ಮೊದಲಾದವುಗಳನ್ನೊಳಗೊಂಡ ಹಲವಾರು ಅಂಶಗಳು ಸೋಂಕಿನ ಪ್ರಕರಣಗಳು ತಗ್ಗುತ್ತಿರುವುದಕ್ಕೆ ಕಾರಣವಾಗಿವೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ವೈರಾಲಜಿಸ್ಟ್ ಡಾ ಟಿ ಜಾಕೋಬ್ ಜಾನ್ ಅವರು, ಮಹಾರಾಷ್ಟ್ರ ಮತ್ತು ಭಾರತದ ಇತರ ಕೆಲವು ರಾಜ್ಯಗಳು ಜೂನ್ ಅಂತ್ಯದಲ್ಲೇ ಸಮುದಾಯ ಪ್ರತಿರಕ್ಷೆಯ ಮಿತಿಯನ್ನು ಮೀರಿವೆ ಎಂದು ಹೇಳುತ್ತಾರೆ. ‘ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಈಗ ಸ್ಥಳೀಯ ಹಂತದಲ್ಲಿದೆ, ಅಂದರೆ ಅದು ಬೇರೆ ಪ್ರದೇಶಗಳಿಗೆ ಹಬ್ಬಲಾರದು’ ಎಂದು ಡಾ ಜಾನ್ ಹೇಳುತ್ತಾರೆ.

ನವೆಂಬರ್ 4 ರವರೆಗೆ ಮಹಾರಾಷ್ಟ್ರದಲ್ಲಿ 66,15,299 ಕೊವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಅವರಲ್ಲಿ 1,40,325 ಜನ ಬಲಿಯಾಗಿದ್ದಾರೆ. ಭಾರತದಲ್ಲಿ ಕೋವಿಡ್ ನಿಂದ ಅತಿಹೆಚ್ಚು ಪ್ರಭಾವಕ್ಕೊಳಗಾದ ರಾಜ್ಯವೆಂದರೆ ಮಹಾರಾಷ್ಟ್ರ. 49 ಲಕ್ಷ ಪ್ರಕರಣಗಳು ಮತ್ತು 33,000 ಸಾವುಗಳೊಂದಿಗೆ ಕೇರಳ ಸ್ಥಾನದಲ್ಲಿದ್ದರೆ, ಸುಮಾರು 30 ಲಕ್ಷ ಸೋಂಕಿತರು ಮತ್ತು 38,000 ಸಾವುಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಮಹಾರಾಷ್ಟದಲ್ಲಿ ಲಸಿಕೆ ಅರ್ಹರಿರುವವರ ಸಂಖ್ಯೆ ಸಮಾರು 9 ಕೋಟಿಯಾಗಿದ್ದು ಅವರ ಪೈಕಿ ಶೇಕಡಾ 34 ರಷ್ಟು ಜನರಿಗೆ ಎರಡು ಡೋಸ್ ಲಸಿಕೆ ನೀಡುವುದು ಮುಗಿದಿದೆ. ಆದರೆ, ಅಕ್ಟೋಬರ್ ನಲ್ಲಿ ಸೆಪ್ಟೆಂಬರ್ ಗೆ ಹೋಲಿಸಿದರೆ ದಿನವಹಿ ಲಸಿಕೆ ಪ್ರಮಾಣ ಶೇ. 48ರಷ್ಟು ತಗ್ಗಿದೆ. ಸೆಪ್ಟೆಂಬರ್ ನಲ್ಲಿ ಪ್ರತಿದಿನ ಸರಾಸರಿ 7,60,955 ಡೋಸ್ಗಳಷ್ಟಿದ್ದ ಲಸಿಕೆಯ ಪ್ರಮಾಣ ಅಕ್ಟೋಬರ್ನಲ್ಲಿ 5,36,704ಕ್ಕೆ ಇಳಿದಿದೆ. ನವರಾತ್ರಿ ಹಬ್ಬ ಮತ್ತು ಮತ್ತು ಜನ ಸುಗ್ಗಿಯಲ್ಲಿ ಬ್ಯುಸಿಯಾಗದ್ದರಿಂದ ಲಸಿಕೆ ಪ್ರಮಾಣ ತಗ್ಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಡಾ ಜಾನ್ ಅವರು ಹೇಳುವ ಪ್ರಕಾರ, ಮಹಾರಾಷ್ಟ್ರದ ಕೊವಿಡ್ ಸ್ಥಿತಿ ರಾಷ್ಟ್ರೀಯ ಚಿತ್ರಣವನ್ನು ಹೋಲುತ್ತದೆ. ಕೇವಲ ಕೇರಳ, ಮಿಜೊರಾಂ, ಸಿಕ್ಕಿಂ ಮತ್ತು ಮೇಘಾಲಯಗಳಲ್ಲಿ ಮಾತ್ರ ಸೋಂಕು ನಿಧಾನ ಗತಿಯಲ್ಲಿ ಇಳಿಯುತ್ತಿದೆ.

ಆದರೆ ಸಾರ್ಸ್-ಕೊವ್-2 ವೈರಸ್ ರೂಪಾಂತರಿ ನಾವು ಮಾಡಿಕೊಂಡಿರುವ ರಕ್ಷಣಾ ವ್ಯವಸ್ಥೆಗೆ ಸವಾಲಾಗಬಲ್ಲದು ಎಂದು ವೈದ್ಯಕೀಯ ಪರಿಣಿತರು ಎಚ್ಚರಿಸಿದ್ದಾರೆ. ‘ಜನ ಎಚ್ಚರಿಕೆಯಿಂದ ಇರಬೇಕಿರುವುದು ಅತ್ಯಂತ ಅವಶ್ಯಕವಾಗಿದೆ,’ ಎಂದು ಮಹಾರಾಷ್ಟ್ರ ಟಾಸ್ಕ್ ಫೋರ್ಸ್ ಸದಸ್ಯ ಡಾ ಶಶಾಂಕ್ ಜೋಷಿ ಹೇಳುತ್ತಾರೆ.

ಜೋಷಿಯವರ ಪ್ರಕಾರ ರಾಜ್ಯದಲ್ಲಿ ಎರಡನೇ ಅಲೆ ತಗ್ಗಿದೆ ಮತ್ತು ಲಸಿಕೆ ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿದ್ದು ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿದೆ. ಲಸಿಕೆಯು ಸೋಂಕನ್ನು ತಡೆಯುವಲ್ಲಿ ತನ್ನ ಪಾತ್ರವನ್ನು ಯಶಸ್ವೀಯಾಗಿ ನಿರ್ವಹಿಸುತ್ತಿದೆ. ‘ಮತ್ತೊಂದು ಸಂಗತಿಯೆಂದರೆ, ಜನರ ದೇಹದಲ್ಲಿ ಡೆಲ್ಟಾ ರೂಪಾಂತರಿ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಿವೆ. ಎರಡನೇ ಅಲೆಯಲ್ಲಿ ಇದೇ ಹೆಚ್ಚು ಆತಂಕಕಾರಿಯಾಗಿತ್ತು. ಆದರೆ ಈ ರೂಪಾಂತರಿ ಮತ್ತೊಂದು ರೂಪ ತಳೆದರೆ ಅಪಾಯ ತಪ್ಪಿದ್ದಲ್ಲ,’ ಎಂದು ಜೋಷಿ ಹೇಳುತ್ತಾರೆ.

ಮುಂಬೈಯಂಥ ಜನದಟ್ಟಣೆಯ ನಗರದಲ್ಲಿ ನಡೆಸಿದ ಸೆರೋಲಾಜಿಕಲ್ ಸರ್ವೆಯು ಜನಸಂಖ್ಯೆಯ ಶೇ. 85% ಕ್ಕಿಂತ ಹೆಚ್ಚು ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂಬ ಅಂಶವನ್ನು ಬಯಲು ಮಾಡಿದೆ. ಪುಣೆಯಲ್ಲಿ ನಡೆಸಿದ ಸಿರೊಸರ್ವೆಯು ಆಗಸ್ಟ್‌ನಲ್ಲಿ 51.55% ಸೆರೋಪ್ರೆವೆಲೆನ್ಸ್ ತೋರಿಸಿದೆ. ಒಟ್ಟಾರೆ ಪ್ರಕರಣಗಳು ಇಳಿಮುಖವಾಗಿದ್ದರೂ, ಮುಂಬೈ ಮತ್ತು ಪುಣೆಯಲ್ಲಿ ದೈನಂದಿನ ಪ್ರಕರಣಗಳಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ.

ಗುರುವಾರದಂದು (ನವೆಂಬರ್ 4) ಮಹಾರಾಷ್ಟ್ರದ 15,062 ಸಕ್ರಿಯ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಸ್ತುತ ಮುಂಬೈ (4160) ಮತ್ತು ಪುಣೆ (3190) ನಗರಗಳಲ್ಲಿ ವರದಿಯಾಗಿವೆ.

ಇದನ್ನೂ ಓದಿ: 

ಯುರೋಪ್​​ನಲ್ಲಿ ಫೆಬ್ರವರಿ ವೇಳೆಗೆ 5 ಲಕ್ಷ ಕೊವಿಡ್ ಸಾವು ಸಂಭವಿಸಬಹುದು: ವಿಶ್ವ ಆರೋಗ್ಯ ಸಂಸ್ಥೆ

TV9 Kannada


Leave a Reply

Your email address will not be published. Required fields are marked *