ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಗರ್ಭಿಣಿ ಫಾರೆಸ್ಟ್ ಗಾರ್ಡ್ವೊಬ್ಬರಿಗೆ ಅಮಾನುಷವಾಗಿ ಥಳಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪರಿಸರ ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.
ತಮ್ಮ ಅನುಮತಿ ಇಲ್ಲದೆ ಗುತ್ತಿಗೆ ಅರಣ್ಯ ಕಾರ್ಮಿಕರನ್ನು ಬೇರೆ ಕೆಲಸಕ್ಕೆ ಕರೆದೊಯ್ದಿದ್ದಾರೆ ಎಂದು ಕೋಪಗೊಂಡು, ಸ್ಥಳೀಯ ಅರಣ್ಯ ನಿರ್ವಹಣಾ ಅಧಿಕಾರಿ ಸರಪಂಚ್ ಮತ್ತು ಅವರ ಪತ್ನಿ ಗರ್ಭಿಣಿ ಎಂಬುದನ್ನು ನೋಡದೆ ಮಹಿಳಾ ಗಾರ್ಡ್ಗೆ ಅಮಾನುಷವಾಗಿ ಥಳಿಸಿದ್ರು. ಸದ್ಯ ಇದಕ್ಕೆ ಪ್ರತಿಕ್ರಿಯಸಿರುವ ಆದಿತ್ಯ ಠಾಕ್ರೆ, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ, ಈ ಇಬ್ಬರು ಆರೋಪಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
The #ForestGuard (lady) in the video was on duty when she was brutally attacked at #Satara for doing her job. FIR has been booked against the accused & they’ve been detained. Hope strict & immediate action is taken against the accused for the barbaric act.pic.twitter.com/XKXUIUjYRd
— Praveen Angusamy, IFS 🐾 (@PraveenIFShere) January 20, 2022