ಬೆಳಗಾವಿ: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರೋ ಹಿನ್ನೆಲೆಯಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗಿದೆ.

ಪೋಲಿಸ್, ಆರೋಗ್ಯ ಇಲಾಖೆ ಸಿಬ್ಬಂದಿ ಗಡಿ ಭಾಗದಲ್ಲಿ ಚೆಕ್ ಪೊಸ್ಟ್ ನಿರ್ಮಾಣ ಮಾಡಿ ತಪಾಸಣೆ ಮಾಡ್ತಿದ್ದಾರೆ. ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನವನ್ನೂ ತಪಾಸಣೆ ಮಾಡಿ RTPCR ವರದಿ ಇದ್ದವರಿಗೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಇನ್ನು ಬೆಳಗಾವಿ- ಕರ್ನಾಟಕ ಗಡಿ ಭಾಗದ ಬಾಚಿ ಚೆಕ್ ಪೋಸ್ಟ್​ಗೆ ತಹಶಿಲ್ದಾರ ಆರ್.ಕೆ.ಕುಲಕರ್ಣಿ ಹಾಗೂ ಬೆಳಗಾವಿ ಎಸಿ ರವೀಂದ್ರ ಕರಲಿಂಗನ್ನವರ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನ ಪರಿಶೀಲನೆ ಮಾಡಿದ್ರು. ಈ ವೇಳೆ ನ್ಯೂಸ್​ಫಸ್ಟ್ ಜೊತೆ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮಾತನಾಡಿ.. ಯಾವುದೇ ಕಾರಣಕ್ಕೂ ಆರ್​ಟಿಪಿಸಿಆರ್ ಟೆಸ್ಟ್ ರಿಪೋಟ್ ಇಲ್ಲದ ವಾಹನಗಳಿಗೆ ಕರ್ನಾಟಕದೊಳಗೆ ಪ್ರವೇಶ ಕಲ್ಪಿಸುವುದಿಲ್ಲ. ಗಡಿ ಭಾಗವವನ್ನ ಬಂದ್ ಮಾಡಿ ತಪಾಸಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

The post ಮಹಾರಾಷ್ಟ್ರದಲ್ಲಿ ಹೆಚ್ಚಿದ ಡೆಲ್ಟಾ ಪ್ಲಸ್.. RT-PCR ನೆಗೆಟಿವ್ ಸರ್ಟಿಫಿಕೇಟ್​ ಇದ್ರಷ್ಟೇ ಕರ್ನಾಟಕಕ್ಕೆ ಎಂಟ್ರಿ appeared first on News First Kannada.

Source: newsfirstlive.com

Source link