ಮುಂಬೈ: ಕೊರೊನಾ ವ್ಯಾಕ್ಸಿನ್ ಅಭಾವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ 18 ರಿಂದ 44 ವರ್ಷದೊಳಗಿನವರಿಗೆ ನೀಡಬೇಕಿದ್ದ ಕೋವ್ಯಾಕ್ಸಿನ್ ಲಸಿಕೆಯನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಯಾರೆಲ್ಲಾ ಕೋವ್ಯಾಕ್ಸಿನ್​ ಬಯಸಿದ್ದರೋ ಅಂತವರಿಗೆ ತಾತ್ಕಾಲಿಕವಾಗಿ ವ್ಯಾಕ್ಸಿನ್ ಸಿಗಲ್ಲ ಅಂತಾ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಸಚಿವ ರಾಜೇಶ್ ತೋಪೆ.. ಕೊರೊನಾ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ ಅನ್ನ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಈಗಾಗಲೇ ಮೊದಲ ಡೋಸ್​ ಪಡೆದುಕೊಂಡ 45 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಎರಡನೇ ಡೋಸ್ ಆಗಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

18 ರಿಂದ 44 ವರ್ಷದೊಳಗಿನ ನಾಗರಿಕರಿಗೆ ಸಿಗಬೇಕಿದ್ದ ಕೋವ್ಯಾಕ್ಸಿನ್​ನ ಮೂರು ಲಕ್ಷ ಡೋಸ್​ ಅನ್ನ 45 ವರ್ಷದೊಳಗಿನವರಿಗೆ ನೀಡಲು ನಿರ್ಧರಿಸಲಾಗಿದೆ. ಕೊರೊನಾ ವ್ಯಾಕ್ಸಿನ್​ ಕೊರತೆಯಿಂದಾಗಿ ಈಗಾಗಲೇ ಮೊದಲ ಡೋಸ್​ ಪಡೆದುಕೊಂಡವರಿಗೆ ಎರಡನೇ ಡೋಸ್ ನೀಡಲು ಸಮಸ್ಯೆಯಾಗಿದೆ. ಹೀಗಾಗಿ ಸರಿಯಾದ ಸಮಯಕ್ಕೆ ವ್ಯಾಕ್ಸಿನ್ ನೀಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

The post ಮಹಾರಾಷ್ಟ್ರದಲ್ಲಿ 18-44 ವರ್ಷದೊಳಗಿನವ್ರಗೆ ಕೋವ್ಯಾಕ್ಸಿನ್ ಲಸಿಕೆ ಸದ್ಯಕ್ಕೆ ಸಿಗಲ್ಲ appeared first on News First Kannada.

Source: newsfirstlive.com

Source link