ಮುಂಬೈ: ಮುಂಬೈನಲ್ಲಿ ರಸ್ತೆಯೊಂದರ ನಿರ್ಮಾಣ ಕಾರ್ಯವನ್ನ ಅಚ್ಚುಕಟ್ಟಾಗಿ ಮಾಡದ ಹಿನ್ನೆಲೆ ರಸ್ತೆ ತುಂಬ ನೀರು ನಿಂತಿದೆ ಎಂದು ಆರೋಪಿಸಿ ರಸ್ತೆ ಮಧ್ಯೆ ಕಂಟ್ರ್ಯಾಕ್ಟರ್​​ನನ್ನ ಕೂರಿಸಿ ಆತನ ಮೇಲೆ ಕಸ ಸುರಿದಿರುವ ಘಟನೆ ನಡೆದಿದೆ. ಉತ್ತರ ಮುಂಬೈನ ಚಂಡಿವಾಲಿ ಕ್ಷೇತ್ರವನ್ನ ಪ್ರತಿನಿಧಿಸುವ ಶಿವಸೇನಾ ಶಾಸಕ ದಿಲಿಪ್ ಲಂಡೆ ಕಂಟ್ರ್ಯಾಕ್ಟರ್​ಗೆ ಕಾರ್ಮಿಕರ ಮೂಲಕ ಈ ಶಿಕ್ಷೆ ನೀಡಿರುವ ಆರೋಪ ಕೇಳಿಬಂದಿದೆ. ಇನ್ನು ತಮ್ಮ ನಡೆಯನ್ನ ಸಮರ್ಥಿಸಿಕೊಂಡಿರುವ ಶಾಸಕ ಕಂಟ್ರ್ಯಾಕ್ಟರ್ ತನ್ನ ಕೆಲಸವನ್ನ ಸರಿಯಾಗಿ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ದಿಲಿಪ್ ಲಂಡೆ.. ನಾನು ಕಳೆದ 15 ದಿನಗಳಿಂದ ಕಂಟ್ರ್ಯಾಕ್ಟರ್​ಗೆ ಕರೆಮಾಡಿ ರಸ್ತೆಯನ್ನ ಕ್ಲಿಯರ್ ಮಾಡುವಂತೆ ಹೇಳಿದ್ದೆ. ಆದ್ರೆ ಅವನು ಮಾಡಿಲ್ಲ. ಶಿವಸೇನಾ ಕಾರ್ಯಕರ್ತರೇ ಮುಂದಾಗಿ ಕ್ಲೀನ್ ಮಾಡುತ್ತಿದ್ದರು. ಈ ವಿಚಾರ ಗೊತ್ತಾದ ಮೇಲೆ ಸ್ಥಳಕ್ಕೆ ಬಂದಿದ್ದಾನೆ. ಆಗ ನಾನು ಅವನಿಗೆ ಇದು ನಿನ್ನ ಜವಾಬ್ದಾರಿ.. ನೀನೇ ಇದನ್ನ ಮಾಡಬೇಕು ಎಂದು ಹೇಳಿದೆ ಎಂದಿದ್ದಾರೆ.

ಇನ್ನು ಕಂಟ್ರ್ಯಾಕ್ಟರ್​ ಮೇಲೆ ಕಸ ಸುರಿಯುವ ವಿಡಿಯೋ ನಿನ್ನೆ ವೈರಲ್ ಆಗಿದ್ದು..ವಿಡಿಯೋದಲ್ಲಿ ಶಾಸಕ ಮತ್ತು ಆತನ ಬೆಂಬಲಿಗರು ಕಂಟ್ರ್ಯಾಕ್ಟರ್ ಮೇಲೆ ಕಸ ಸುರಿಯಿರಿ ಎಂದು ಕೂಗುತ್ತಿರುವುದನ್ನ ಕೇಳಬಹುದಾಗಿದೆ.

The post ಮಹಾರಾಷ್ಟ್ರದಲ್ಲೊಂದು ಅಮಾನವೀಯ ಘಟನೆ: ಕಂಟ್ರ್ಯಾಕ್ಟರ್​ ಮೇಲೆ ಕಸ ಸುರಿಸಿದ ಶಿವಸೇನೆ MLA appeared first on News First Kannada.

Source: newsfirstlive.com

Source link