ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ವಿವರ | New Coronavirus Covid19 Guidelines released to travelers coming from Maharashtra to Karnataka

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಕೊರೊನಾ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ವಿವರ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಹೊಸ ಕೊರೊನಾ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ 2 ದಿನ ಇದ್ದು ವಾಪಸಾಗುವವರಿಗೆ ಹೊಸ ಗೈಡ್‌ಲೈನ್ಸ್ ಜಾರಿಗೊಳಿಸಲಾಗಿದೆ. ಅದರಂತೆ, ಮಹಾರಾಷ್ಟ್ರದಿಂದ ವಾಪಸ್ ಆಗುವವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಸಡಿಲಿಕೆ ಮಾಡಲಾಗಿದೆ. ಆದರೆ, ಕೊವಿಡ್ ಪರೀಕ್ಷೆ ಇಲ್ಲದಿದ್ದರೂ ಕೆಲ ಷರತ್ತುಗಳು ಅನ್ವಯ ಆಗಲಿದೆ.

ಮಹಾರಾಷ್ಟ್ರದಲ್ಲಿ ಕೇವಲ 2 ದಿನಗಳು ಇದ್ದು ವಾಪಸ್ಸಾಗುವ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗಿದೆ. ರಾಜ್ಯ ಆರೋಗ್ಯ ‌ಇಲಾಖೆ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರದಿಂದ ವಾಪಸ್ ಆಗುವವರಿಗೆ ಎರಡು ಡೋಸ್ ಕೋವಿಡ್ ಲಸಿಕೆ ‌ಕಡ್ಡಾಯ ಆಗಿರಲಿದೆ. ಎರಡನೇ ಡೋಸ್ ಲಸಿಕೆ ಪಡೆದು 14 ದಿನಗಳು ಆಗಿರಬೇಕು. ಕೊವಿಡ್ ಗುಣಲಕ್ಷಣಗಳನ್ನು ಹೊಂದಿರಬಾರದು. ಜ್ವರ, ಶೀತ, ಕೆಮ್ಮು, ಗಂಟಲು‌ ನೋವು, ಉಸಿರಾಟದ ತೊಂದರೆಯಿಂದ ಮುಕ್ತರಾಗಿರಬೇಕು ಎಂದು ಹೇಳಲಾಗಿದೆ.

ಇಲ್ಲಿಗೆ ಬಂದ ನಂತರ ಮುಂದಿನ 7 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಆರೋಗ್ಯದ ಬಗ್ಗೆ ನಿಗಾ ಇಡಬೇಕು. ಒಂದು ವೇಳೆ ಕೊವಿಡ್ ಗುಣಲಕ್ಷಣಗಳು ಕಂಡುಬಂದರೆ ತಕ್ಷಣ ಕೊವಿಡ್19 ಟೆಸ್ಟ್ ಮಾಡಿಸಬೇಕು. ವಾಪಸ್ ಆಗುವಾಗ ಮಹಾರಾಷ್ಟ್ರದಲ್ಲಿ ಕೇವಲ ಎರಡು ದಿನಗಳು ಮಾತ್ರ ಇದ್ದ ಬಗ್ಗೆ ಟಿಕೆಟ್ ಪ್ರೊಡ್ಯೂಸ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಯೋಜನೆಯ ಕುರಿತು ಇನ್ನೆರಡು ವಾರದಲ್ಲಿ ನಿರ್ಧಾರ ಸಾಧ್ಯತೆ

ಇದನ್ನೂ ಓದಿ: Coronavirus: ಸಿಎಂ ಬಸವರಾಜ ಬೊಮ್ಮಾಯಿ ಒಎಸ್​ಡಿಗೆ ಕೊರೊನಾ ಪಾಸಿಟಿವ್, ಗೃಹ ಕಚೇರಿ ಕೃಷ್ಣಾದಲ್ಲಿ ಸ್ಯಾನಿಟೈಸೇಶನ್

TV9 Kannada

Leave a comment

Your email address will not be published. Required fields are marked *