ಮಹಾರಾಷ್ಟ್ರದ ಲಕ್ಷ್ಮಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿ ರದ್ದು ಮಾಡಿದ ಆರ್​​ಬಿಐ | RBI Bank Cancelled Maharashtra’s Laxmi Co operative Bank Limited Depositors Can Claim Up To Rs 5 Lakh


ಸೋಲಾಪುರ ಮೂಲದ ಬ್ಯಾಂಕ್​​ಗೆ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳಿಲ್ಲ, ಅದು ನಿಯಮಗಳಿಗೆ ಬದ್ಧವಾಗಿಲ್ಲ ಎಂದು ಆರ್​ಬಿಐ ಹೇಳಿದೆ.

ಮಹಾರಾಷ್ಟ್ರದ ಲಕ್ಷ್ಮಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿ ರದ್ದು ಮಾಡಿದ ಆರ್​​ಬಿಐ

ಮಹಾರಾಷ್ಟ್ರದ ಲಕ್ಷ್ಮಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹಾರಾಷ್ಟ್ರದ ಲಕ್ಷ್ಮಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ (Laxmi Co-operative Bank Limited) ಪರವಾನಗಿಯನ್ನು ಗುರುವಾರ ರದ್ದುಗೊಳಿಸಿದೆ. ಸೋಲಾಪುರ ಮೂಲದ ಬ್ಯಾಂಕ್​​ಗೆ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳಿಲ್ಲ, ಅದು ನಿಯಮಗಳಿಗೆ ಬದ್ಧವಾಗಿಲ್ಲ ಎಂದು ಹೇಳಿದೆ. ಇಂದಿನಿಂದಲೇ ಆದೇಶ ಜಾರಿಯಾಗಲಿದೆ. ಆರ್‌ಬಿಐ ಹೇಳಿಕೆಯಲ್ಲಿ, ಮಹಾರಾಷ್ಟ್ರದ ಸೊಲ್ಲಾಪುರದ ಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, 1949 ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ವಿಭಾಗ 56 ಸೆಕ್ಷನ್ 5(ಬಿ) ನಲ್ಲಿ ವ್ಯಾಖ್ಯಾನಿಸಿದಂತೆ ಠೇವಣಿ ಸ್ವೀಕಾರ ಮತ್ತು ಠೇವಣಿಗಳ ಮರುಪಾವತಿಯನ್ನು ಒಳಗೊಂಡಿರುವ ‘ಬ್ಯಾಂಕಿಂಗ್’ ವ್ಯವಹಾರವನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆರ್‌ಬಿಐ ಸಹಕಾರಕ್ಕಾಗಿ ಕಮಿಷನರ್ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್, ಮಹಾರಾಷ್ಟ್ರದ ಬ್ಯಾಂಕ್ ಅನ್ನು ಮುಚ್ಚುವ ಆದೇಶವನ್ನು ಹೊರಡಿಸಲು ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್ ಅನ್ನು ನೇಮಿಸುವಂತೆ ತಿಳಿಸಿದೆ.

ದಿವಾಳಿಯಾದ ಮೇಲೆ, ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಅಥವಾ ಡಿಐಸಿಜಿಸಿಯಿಂದ ₹ 5 ಲಕ್ಷದವರೆಗಿನ ಠೇವಣಿ ವಿಮೆಯ ಕ್ಲೈಮ್ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ. ಬ್ಯಾಂಕ್ ಸಲ್ಲಿಸಿದ ಮಾಹಿತಿಯ ಪ್ರಕಾರ, 99 ಪ್ರತಿಶತ ಠೇವಣಿದಾರರು ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು ಡಿಐಸಿಜಿಸಿಯಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.