ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ಒಂದು ವರ್ಷ ಅನರ್ಹ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಅನುಚಿತ ವರ್ತನೆ ತೋರಿದ 12 ಬಿಜೆಪಿ ಶಾಸಕರನ್ನು ವಿಧಾನಸಭಾ ಸ್ಪೀಕರ್ ಭಾಸ್ಕರ್ ಜಾದವ್ ಒಂದು ವರ್ಷ ಅನರ್ಹಗೊಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಇಂದಿನಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಿತ್ತು. ಈ ವೇಳೆ ವಿಧಾನಸಭೆಯಲ್ಲಿ ಪ್ರಮುಖ ವಿಷಯದ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಸಂದರ್ಭ ಮಧ್ಯಪ್ರವೇಶಿಸಿದ್ದಕ್ಕೆ ಬಿಜೆಪಿಯ ಶಾಸಕರು ತನ್ನನ್ನು ನಿಂದಿಸಿದ್ದಾರೆ ಕಾರಣ ನೀಡಿದ 12 ಮಂದಿಂ ಶಾಸಕರನ್ನು 1 ವರ್ಷ ಅನರ್ಹಗೊಳಿಸಿದ್ದಾರೆ.

ಸ್ಪೀಕರ್ ಅವರ ನಿರ್ಧಾರದ ಬಳಿಕ ಈ ಆರೋಪವನ್ನು ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅಲ್ಲಗಳೆದಿದ್ದಾರೆ. ಇದು ಸುಳ್ಳು ಆರೋಪ, ಕಟ್ಟು ಕಥೆಯಾಗಿದೆ. ನಮ್ಮ ಪಕ್ಷದ ಶಾಸಕರು ಸರ್ಕಾರದ ಆಡಳಿತದಲ್ಲಿ ಸಮಸ್ಯೆಯ ಬಗ್ಗೆ ಹೇಳುತ್ತಿದ್ದಾಗ ಸ್ಪೀಕರ್ ನಮಗೆ ಸಮಯವಕಾಶ ನೀಡದೆ ಈ ರೀತಿ ಆರೋಪ ಹೊರಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಐಟಿ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಇನ್ನೂ ಕೇಸ್ ದಾಖಲಿಸುತ್ತಿರುವುದು ಆಘಾತಕಾರಿ – ಸುಪ್ರೀಂಕೋರ್ಟ್

ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಭಾಸ್ಕರ್ ಜಾದವ್, ಬಿಜೆಪಿಯ ಕೆಲ ಶಾಸಕರು ನನ್ನ ಕ್ಯಾಬಿನ್‍ಗೆ ಬಂದು ದೇವೇಂದ್ರ ಫಡ್ನವೀಸ್ ಮತ್ತು ಚಂದ್ರಕಾಂತ್ ಪಾಟೀಲ್ ಅವರ ಮುಂದೆ ನನ್ನನ್ನು ನಿಂದಿಸಿದ್ದಾರೆ ಎಂದು ದೂರಿದ್ದಾರೆ.

ಶಾಸಕರಾದ ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗದ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ, ಕೀರ್ತಿಕುಮಾರ್ ಬಾಂಗ್ಡಿಯಾ ಅನರ್ಹಗೊಂಡಿದ್ದಾರೆ.

The post ಮಹಾರಾಷ್ಟ್ರದ 12 ಬಿಜೆಪಿ ಶಾಸಕರು ಒಂದು ವರ್ಷ ಅನರ್ಹ appeared first on Public TV.

Source: publictv.in

Source link