ಮಹಾರಾಷ್ಟ್ರ, ಕೇರಳ ಆಯ್ತು.. ಈಗ ರವಿ ಪೂಜಾರಿ ವಶಕ್ಕೆ ಪಡೆದ ಗುಜರಾತ್​ ATS

ಮಹಾರಾಷ್ಟ್ರ, ಕೇರಳ ಆಯ್ತು.. ಈಗ ರವಿ ಪೂಜಾರಿ ವಶಕ್ಕೆ ಪಡೆದ ಗುಜರಾತ್​ ATS

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನ ಮಹಾರಾಷ್ಟ್ರ, ಕೇರಳ ಪೊಲೀಸರ ತನಿಖೆ ಬಳಿಕ ಗುಜರಾತ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 30 ದಿನಗಳ ಕಾಲ ಗುಜರಾತ್​ನ ಎಟಿಎಸ್ ವಶಕ್ಕೆ ನೀಡಿ ಬೆಂಗಳೂರಿನ 62ನೇ ಸಿಸಿಎಚ್ ಆದೇಶ ನೀಡಿದೆ.

ಶೂಟೌಟ್ ಪ್ರಕರಣದಲ್ಲಿ ರವಿ ಪೂಜಾರಿಯನ್ನ ವಶಕ್ಕೆ ನೀಡುವಂತೆ ಗುಜರಾತ್ ಎಟಿಎಸ್ ಕೇಳಿತ್ತು. ಜನವರಿ 2017ರಲ್ಲಿ ಗುಜರಾತ್‌ನ ಬೊರ್ಸಾದ್​ನಲ್ಲಿ ಸಿಟಿ ಕೌನ್ಸಿಲರ್ ಪ್ರಗ್ನೇಶ್ ಪಟೇಲ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಗುಜರಾತ್ ಎಟಿಎಸ್ ಬಂಧಿಸಿತ್ತು.

ತನಿಖೆ ವೇಳೆ ರವಿ ಪೂಜಾರಿ ಪಾತ್ರ ಬೆಳಕಿಗೆ ಬಂದಿತ್ತು. ಕರ್ನಾಟಕ ಪೊಲೀಸರ ಸುಪರ್ದಿಯಲ್ಲಿರುವ ರವಿ ಪುಜಾರಿಯನ್ನ ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಗುಜರಾತ್ ಎಟಿಎಸ್ ಮನವಿ ಸಲ್ಲಿಸಿತ್ತು. ಗುಜರಾತ್ ತನಿಖಾಧಿಕಾರಿಗಳ ಮನವಿಯನ್ನ ಪುರಸ್ಕರಿಸಿದ ಬೆಂಗಳೂರಿನ ಕೋರ್ಟ್​​, 30 ದಿನಗಳ ಕಾಲ ಗುಜರಾತ್ ಎಟಿಎಸ್ ವಶಕ್ಕೆ ನೀಡಿದೆ.

The post ಮಹಾರಾಷ್ಟ್ರ, ಕೇರಳ ಆಯ್ತು.. ಈಗ ರವಿ ಪೂಜಾರಿ ವಶಕ್ಕೆ ಪಡೆದ ಗುಜರಾತ್​ ATS appeared first on News First Kannada.

Source: newsfirstlive.com

Source link