ಮಹಾರಾಷ್ಟ್ರ ಬಂಜಾರ ಸಮ್ಮೇಳನಕ್ಕೆ ಕರ್ನಾಟಕದಿಂದ 2 ಲಕ್ಷ ಮಂದಿ: ಸರ್ದಾರ್ ಸೇವಾಲಾಲ್ ಸ್ವಾಮೀಜಿ – Banjara Sammelan in Maharashtra 2 lakh from Karnataka will Participate Says Sardar Sevalal Swamiji


ಭಾರತದಲ್ಲಿ ಬಂಜಾರ ಸಮುದಾಯಕ್ಕೆ ಸೇರಿದವರ ಸಂಖ್ಯೆ ಸುಮಾರು 9 ಕೋಟಿ ಇರಬಹುದು ಎಂದು ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.

ಮಹಾರಾಷ್ಟ್ರ ಬಂಜಾರ ಸಮ್ಮೇಳನಕ್ಕೆ ಕರ್ನಾಟಕದಿಂದ 2 ಲಕ್ಷ ಮಂದಿ: ಸರ್ದಾರ್ ಸೇವಾಲಾಲ್ ಸ್ವಾಮೀಜಿ

ಬಿಜೆಪಿ ಶಾಸಕ ಪಿ.ರಾಜೀವ್

ಬೆಂಗಳೂರು: ಮಹಾರಾಷ್ಟ್ರದಲ್ಲಿ ಜ 25ರಿಂದ 30ರವರೆಗೂ ಅಖಿಲ ಭಾರತ ಬಂಜಾರ ಸಮ್ಮೇಳನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಸಮ್ಮೇಳನದಲ್ಲಿ ಕರ್ನಾಟಕದ ಸುಮಾರು 2 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿ ಬಂಜಾರ ಸಮುದಾಯಕ್ಕೆ ಸೇರಿದವರ ಸಂಖ್ಯೆ ಸುಮಾರು 9 ಕೋಟಿ ಇರಬಹುದು ಎಂದು ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.

ಸ್ವಾಮೀಜಿ ನಂತರ ಮಾತನಾಡಿದ ಬಿಜೆಪಿ ಶಾಸಕ ಪಿ.ರಾಜೀವ್, ಹಿಂದೂ ಸಂಸ್ಕೃತಿಗೆ ಎರಡು ದೊಡ್ಡ ಗಂಡಾತರಗಳಿವೆ. ಜಿಹಾದಿಗಳನ್ನು ಹುಟ್ಟುಹಾಕುವವರು ಹಾಗೂ ಕ್ರೈಸ್ತ ಮಿಷನರಿಗಳಿಂದ ಮತಾಂತರದ ಕೆಲಸ ನಿರಂತರ ನಡೆಯುತ್ತಿದೆ. ಇದು ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ದೊಡ್ಡ ಗಂಡಾಂತರ. ಬಂಜಾರ ಸಮುದಾಯದವರನ್ನು ಮತಾಂತರ ಮಾಡಲು ಕ್ರೈಸ್ತ ಮಿಷನರಿಗಳು ಸಾಕಷ್ಟು ಪ್ರಯತ್ನ ಮಾಡಿದರು ಎಂದು ಹೇಳಿದರು.

ಮತಾಂತರವಾಗಿದ್ದ 1700ಕ್ಕೂ ಹೆಚ್ಚು ಕುಟುಂಬಗಳು ಈಗ ಘರ್ ವಾಪ್ಸಿ ಆಗಿವೆ. ಹಿಂದೂ ಎನ್ನುವ ಪದಕ್ಕೆ ಅಶ್ಲೀಲ ಎಂಬ ಅರ್ಥವಿದೆ ಎನ್ನುವುದು ಸರಿಯಲ್ಲ. ಹಿಂದೂ ಮತಗಳನ್ನು ತೆಗೆದುಕೊಂಡು ಹಿಂದೂಗಳನ್ನೇ ಅಶ್ಲೀಲ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ? ಇದು ವಿಕೃತ ಮನಸ್ಸಿನ ಸ್ಥಿತಿ ಎಂದು ಟೀಕಿಸಿದರು.

ಭಾರತವನ್ನು ಹಿಂದು ಭೂಮಿ ಎಂದು ಕರೆಯುತ್ತೇವೆ. ಭಾರತಕ್ಕೆ ಇರುವ ಎರಡು ದೊಡ್ಡ ಸಮಸ್ಯೆ ಎಂದರೆ ಜಿಹಾದಿ ಮನಸ್ಥಿತಿ ಮತ್ತು ಕ್ರೈಸ್ತ ಮಷಿನರಿಗಳ ಮತಾಂತರ. ವಿಕೃತ ಮನಸ್ಸಿನ ಮನಸ್ಥಿತಿಯವರು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಯಾಗಿ ಹಿಂದೂ ಶಬ್ದಕ್ಕೆ ಅಶ್ಲೀಲ ಅರ್ಥವಿದೆ ಎಂದು ಹೇಳುವುದು ಹೇಗೆ ಸಾದ್ಯ? ಹಿಂದೂವನ್ನು ಅಶ್ಲೀಲ ಎಂದು ಕರೆಯುವವರಿಗೆ ವಿಕೃತ ಮನಃಸ್ಥಿತಿ ಎಂದು ಹೇಳಬೇಕಾಗುತ್ತೆ ಎಂದರು.

ಲಂಬಾಣಿ ತಾಂಡಾಗಳನ್ನು ಕಾಂಗ್ರೆಸ್ ಎಂದಿಗೂ ಕಂದಾಯ ಗ್ರಾಮ ಮಾಡಿರಲಿಲ್ಲ. ಆದರೆ ಬೊಮ್ಮಾಯಿ‌ ಅವರು ಕಂದಾಯ ಗ್ರಾಮ ಮಾಡಿದ್ದಾರೆ. 75 ಕುಟುಂಬಕ್ಕೆ ಕಂದಾಯ ಗ್ರಾಮದಡಿ ಹಕ್ಕು ಪತ್ರ ನೀಡುತ್ತಿದ್ದೇವೆ. ಡಿಸೆಂಬರ್ ಮೊದಲ ವಾರ ಒಂದೇ ವೇದಿಕೆಯಲ್ಲಿ 60 ಸಾವಿರ ಕುಟುಂಬಕ್ಕೆ ಹಕ್ಕು ಪತ್ರ ನೀಡಲಿದ್ದೇವೆ. ಬಳಿಕ ಶಿವಮೊಗ್ಗದಲ್ಲಿ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮಾಡುತ್ತೇವೆ. ಈಗ ಕಲಬುರಗಿ, ಕೊಪ್ಪಳ, ರಾಯಚೂರು ಬೀದರ್ ಭಾಗದ ತಾಂಡಾದವರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ ಎಂದು ವಿವರಿಸಿದರು.

ಎಸ್​ಟಿಪಿಟಿಎಸ್​ಪಿ ಯೋಜನೆಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗೆ ಸರ್ಕಾರ ಬಳಸಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್​ಟಿಪಿ-ಟಿಎಸ್​ಪಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಆರಂಭಿಸಿದ್ದೇ ಸಿದ್ದರಾಮಯ್ಯ. ಬಿಜೆಪಿ ಸರ್ಕಾರವು 28 ಸಾವಿರ ಕೋಟಿ ಹಣವನ್ನು ಎಸ್​ಟಿಪಿ-ಟಿಎಸ್​ಪಿ ಅನುದಾನವಾಗಿ ನೀಡಿದೆ ಎಂದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.