ಮಹಾರಾಷ್ಟ್ರದ ಮಹಾ ವಿಕಾಸ್ ಅಘಾದಿ ಸರ್ಕಾರದಲ್ಲಿ ಹೊಸದೊಂದು ಬಿರುಕು ಕೇಳುವ ಸಾಧ್ಯತೆ ಇದೆ. ಮಹಾರಾಷ್ಟ್ರ ಪ್ರದೇಶ್ ಕಾಂಗ್ರೆಸ್ ಕಮಿಟಿ ಮುಖ್ಯಸ್ಥ ನಾನಾ ಪಟೋಲ್ ಕಳೆದ ಶನಿವಾರ ಮುಂದಿನ ಚುನಾವಣೆಯನ್ನ ಏಕಾಂಗಿಯಾಗಿಯೇ ಪಕ್ಷ ಎದುರಿಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಪಕ್ಷ ಒಪ್ಪಿದ್ರೆ ನಾನೇ ಸಿಎಂ ಆಗ್ತೇನೆ ಅಂತಲೂ ಹೇಳಿದ್ದಾರೆ. ಈ ಹಿಂದೆಯೂ ಹಲವು ವಿಚಾರಗಳಿಗೆ ಎನ್​ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್ ನಡುವೆ ಮನಸ್ತಾಪಗಳು ಎದುರಾಗಿದ್ದವು.

ಇನ್ನು ಕಾಂಗ್ರೆಸ್ ಈ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಕೇಂದ್ರ ಸಚಿವ ರಾಮದಾಸ್ ಅಥಾವಳೆ ಶಿವಸೇನೆಗೆ ಘರ್ ವಾಪ್ಸಿ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಎನ್​ಡಿಎಗೆ ಶಿವಸೇನೆ ಮರಳಿ ಬರುವುದು ಒಳ್ಳೆಯದು ಎಂದಿದ್ದಾರೆ.

ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧಿಸಿ ಗೆಲ್ಲುವುದು ಕಷ್ಟವಿದೆ.. ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದಲೇ ಕಾಂಗ್ರೆಸ್ ಸರ್ಕಾರದಲ್ಲಿ ಸ್ಥಾನ ಪಡೆದುಕೊಂಡಿದೆ. ನಾನಾ ಪಟೋಲ್ ಸಿಎಂ ಆಗ್ತೀನಿ ಅನ್ನೋದಿದ್ರೆ ಅದನ್ನ ಸಿಎಂ ಉದ್ಧವ್ ಠಾಕ್ರೆಯ ಬಳಿ ನೇರವಾಗಿ ಹೇಳಬೇಕು. ಕಾಂಗ್ರೆಸ್​ಗೆ ಬಹುಶಃ ಸಿಎಂ ಅಭ್ಯರ್ಥಿಗಿಂತಲೂ ರಾಜ್ಯವೇ ಬೇಕು ಎನ್ನಿಸುತ್ತದೆ.. ಶಿವಸೇನೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ದೇವೇಂದ್ರ ಫಡ್ನವಿಸ್​ ಅವರಿಗೆ 2.5 ವರ್ಷ ಮುಖ್ಯಮಂತ್ರಿ ಮಾಡಬೇಕೆಂದು ಪ್ರಸ್ತಾಪಿಸುತ್ತೇನೆ. ನಾನು ಈ ವಿಚಾರವನ್ನ ಫಡ್ನವಿಸ್ ಬಳಿಯೂ ಚರ್ಚಿಸಿದ್ದೇನೆ ಎಂದಿದ್ದಾರೆ.

The post ‘ಮಹಾ’ಸರ್ಕಾರದಲ್ಲಿ ಹೊಸಬಿರುಕು ಮೂಡಿಸಿದ ಕಾಂಗ್ರೆಸ್..?: ಸಿಎಂ ಆಗ್ತೇನೆ ಎಂದ ನಾನಾ ಪಟೋಲ್ appeared first on News First Kannada.

Source: newsfirstlive.com

Source link