ಮಹಿಳಾ ಕಾನ್ಸ್​ಟೇಬಲ್ ಕಿಡ್ನ್ಯಾಪ್​& ಮರ್ಡರ್ ಕೇಸ್: ಲೇಡಿ ಕಾನ್ಸ್​ಟೇಬಲ್ ಸೇರಿ ಇಬ್ಬರ ಬಂಧನ | Tumkur police arrest lady constable and one more accused in kidnap and murder case


ಮಹಿಳಾ ಕಾನ್ಸ್​ಟೇಬಲ್ ಸುಧಾ ಕಿಡ್ನ್ಯಾಪ್​& ಮರ್ಡರ್​ ಪ್ರಕರಣಕ್ಕೆ ಸಂಬಂಧಿಸಿ ಅದೇ ಠಾಣೆಯ ಲೇಡಿ ಕಾನ್ಸ್​ಟೇಬಲ್​ ಎಸ್​.ರಾಣಿ ಹಾಗೂ ಆರೋಪಿ ನಿಖೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳಾ ಕಾನ್ಸ್​ಟೇಬಲ್ ಕಿಡ್ನ್ಯಾಪ್​& ಮರ್ಡರ್ ಕೇಸ್: ಲೇಡಿ ಕಾನ್ಸ್​ಟೇಬಲ್ ಸೇರಿ ಇಬ್ಬರ ಬಂಧನ

ನಾಪತ್ತೆಯಾಗಿರುವ ಪಿಸಿ ಸುಧಾ

ತುಮಕೂರು: ಹುಳಿಯಾರು ಠಾಣೆಯ ಮಹಿಳಾ ಕಾನ್ಸ್​ಟೇಬಲ್ ಸುಧಾ ಕಿಡ್ನ್ಯಾಪ್​& ಮರ್ಡರ್​ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಹುಳಿಯಾರು ಠಾಣೆಯ ಮತ್ತೊಬ್ಬ ಲೇಡಿ ಕಾನ್ಸ್​ಟೇಬಲ್​ ಎಸ್​.ರಾಣಿ ಹಾಗೂ ಆರೋಪಿ ನಿಖೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ನಿಖೇಶ್​ ಹಾಗೂ ಮಂಜುನಾಥ್ ಎಂಬುವವರು ರಾಣಿ ಸೂಚನೆ ಮೇರೆಗೆ ಮಹಿಳಾ ಕಾನ್ಸ್​ಟೇಬಲ್​ ಸುಧಾ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಸುಧಾಳನ್ನ ಕೊಲೆ ಮಾಡಲೇಬೇಕು ಅಂತ ರಾಣಿ ತಾಕೀತು ಮಾಡಿದ್ದಳು. ರಾಣಿಯ ಆಜ್ಞೆ ಮೇರೆಗೆ ಮಂಜುನಾಥ ಮತ್ತು ನಿಖೇಶ ಒಂದು ತಿಂಗಳಿಂದ ಕೊಲೆಗೆ ಸಂಚು ರೂಪಿಸಿದ್ದರು. ಹಾಗೂ ಒಮ್ಮೆ ಕೊಲೆಗೆ ಯತ್ನ ಕೂಡ ಮಾಡಿದ್ದರು. ಸುಧಾಳ ಮಗನನ್ನ ನೋಡಿಕೊಂಡು ಬರುವ ನೆಪದಲ್ಲಿ ಒಮ್ಮೆ ಸಾಗರಕ್ಕೆ ಕರೆದುಕೊಂಡು ಹೋಗಿದ್ದ ಮಂಜುನಾಥ ಮತ್ತು ನಿಖೇಶ್, ಸುಧಾಳ ಕೊಲೆಗೆ ಯತ್ನಿಸಿದ್ದರು. ಆದ್ರೆ ಅಂದು ಜೊತೆಯಲ್ಲಿ ಮಕ್ಕಳು ಇದ್ದಿದ್ರಿಂದ ಕೊಲೆ ಮಾಡೋಕೆ ಆಗಿರಲಿಲ್ಲ. ಕೊನೆಗೆ ಇದೇ ತಿಂಗಳು 13ರಂದು ಮರ್ಡರ್ ಮಾಡೋಕೆ ಡೇಟ್ ಫಿಕ್ಸ್ ಮಾಡಿ ನಾಲ್ಕೈದು ಬಾರಿ ಕರೆ ಮಾಡಿ ಸುಧಾರನ್ನ ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆ ಗೇಟ್ ಬಳಿ ಕರೆಸಿಕೊಂಡಿದ್ದಾರೆ. ಬಳಿಕ ಈಟಿಯೋಸ್ ಕಾರಿಗೆ ಕೂರಿಸಿಕೊಂಡು ತಿಪಟೂರಿಗೆ ತೆರಳಿದ್ದಾರೆ.

ತಿಪಟೂರು ನಗರಕ್ಕೆ ಬರುತ್ತಿದ್ದಂತೆ ಮಂಜುನಾಥನೂ ಕೂಡ ಅದೇ ಕಾರ್ ಹತ್ತಿಕೊಂಡಿದ್ದಾನೆ. ಹತ್ತುತ್ತಿದ್ದಂತೆ ಸುಧಾಳ ಕಣ್ಣಿಗೆ ಮೂವ್ ಹಚ್ಚಿದ್ದಾನೆ. ಸುಧಾ ಕಣ್ಣು ಉಜ್ಜುತ್ತಿದ್ದಂತೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ. ಎದೆ, ಹೊಟ್ಟೆ, ಬೆನ್ನು, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿನ ಪೊದೆವೊಂದಕ್ಕೆ ಸುಧಾಳ ಮೃತ ದೇಹ ಎಸೆದು ಪರಾರಿ ಆಗಿದ್ದಾರೆ. ಸುಧಾ ಮತ್ತು ರಾಣಿ ಮಧ್ಯೆ ಕೆಲಸದ ವಿಚಾರವಾಗಿ ಜಗಳ ಇತ್ತು ಎನ್ನಲಾಗಿದೆ. ಈ ಹಿಂದೆ ರಾಣಿ ಕೋರ್ಟ್ ಬೀಟ್ ಮಾಡುತ್ತಿದ್ದಳು. ಆದ್ರೆ ಇತ್ತೀಚೆಗೆ ಸುಧಾ ಕೋರ್ಟ್ ಡ್ಯೂಟಿಯನ್ನ ತನಗೆ ಹಾಕಿಸಿಕೊಂಡಿದ್ದಳು. ಇದೇ ವಿಚಾರವಾಗಿ ದ್ವೇಷ ಹುಟ್ಟಿಕೊಂಡಿತ್ತು ಎನ್ನಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.