ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಮಹಿಳಾ ಕ್ರಿಕೆಟ್​​ನ ಎಲ್ಲಾ ಫಾರ್ಮ್ಯಾಟ್​​ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಪ್ರಥಮ ಆಟಗಾರ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಚಾರ್ಲೋಟ್ ಎಡ್ವರ್ಡ್ಸ್​​ರನ್ನ ಮಿಥಾಲಿ ರಾಜ್ ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ. ಎಡ್ವರ್ಡ್ಸ್ ಎಲ್ಲಾ ಆವೃತ್ತಿಗಳು ಸೇರಿ ಒಟ್ಟಾರೆ 10,273 ರನ್ ಗಳಿಸಿದ್ರು. ಇವರನ್ನ ಹಿಂದಿಕ್ಕಲು ಮಿಥಾಲಿಗೆ ಕೇವಲ 12 ರನ್‌ಗಳ ಅಗತ್ಯವಿತ್ತು. ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿರುವ ಮೂಲಕ ಮಿಥಾಲಿ ರಾಜ್ ಈ ದಾಖಲೆ ಬರೆದಿದ್ದಾರೆ.

The post ಮಹಿಳಾ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ರನ್; ಹೊಸ ದಾಖಲೆ ಬರೆದ ಮಿಥಾಲಿ ರಾಜ್ appeared first on News First Kannada.

Source: newsfirstlive.com

Source link