ಮಹಿಳಾ ಬಿಗ್​ಬ್ಯಾಷ್​ನಲ್ಲಿ ದಾಖಲೆ ಬರೆದ ಟೀಂ ಇಂಡಿಯಾ ಕ್ಯಾಪ್ಟನ್​ ಹರ್ಮನ್​ ಪ್ರೀತ್ ಕೌರ್

ಮಹಿಳಾ ಬಿಗ್​ಬ್ಯಾಷ್​ ಲೀಗ್​​​ನಲ್ಲಿ (WBBL) ಟೀಮ್​ ಇಂಡಿಯಾ ಟಿ20 ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​​ ದಾಖಲೆ ಬರೆದಿದ್ದಾರೆ. WBBL ಟೂರ್ನಿಯಲ್ಲಿ ಮೆಲ್ಬೋರ್ನ್​​​ ರೆನೆಗೇಡ್ಸ್​​​ ತಂಡದ ಆಟಗಾರ್ತಿಯಾಗಿರುವ ಹರ್ಮನ್​, ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.

ಆ ಮೂಲಕ ವಿದೇಶಿ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ಮೊದಲ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಹರ್ಮನ್ ಈ ಆವೃತ್ತಿಯ ಬಿಗ್​ಬ್ಯಾಷ್​ ಟೂರ್ನಿಯಲ್ಲಿ 399 ರನ್​ ಸೇರಿದಂತೆ, 15 ವಿಕೆಟ್​ ಕಬಳಿಸಿ ಆಲ್​ರೌಂಡ್​​ ಆಟವಾಡಿದ್ದಾರೆ. ಅಷ್ಟೆ ಅಲ್ಲದೆ, ಟೂರ್ನಿಯಲ್ಲಿ 18 ಸಿಕ್ಸರ್ಸ್​ಗಳನ್ನು ಸಿಡಿಸಿರುವ ಹರ್ಮನ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

WBBLನಲ್ಲಿ ಹರ್ಮನ್​ ಪ್ರೀತ್​ರ ಈ ಅದ್ಭುತ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ವಿತರಕರ ಮನ ಗೆದ್ದಿದ್ದಾರೆ. ಟೂರ್ನಿಯಲ್ಲಿ ಪರ್ತ್​ ಸ್ಕಾಚರ್ಸ್ ತಂಡದ ಬೆತ್ ಮೂನಿ (31 ಮತ) ಮತ್ತು ಸೋಫಿ ಡಿವೈನ್‌ರನ್ನು (28 ಮತ) ಹಿಂದಿಕ್ಕುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಹರ್ಮನ್​ ಪ್ರತಿನಿಧಿಸಿರುವ ತಂಡ ಮೆಲ್ಬೋರ್ನ್​ ರೆನೆಗೇಡ್ಸ್​ ತಂಡ, ಫೈನಲ್​ಗೇರಲು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ನಾಳೆ ಚಾಲೆಂಜರ್ಸ್​ ಪಂದ್ಯದಲ್ಲಿ ಅಡಿಲೇಡ್​ ಸ್ಟ್ರೈಕರ್ಸ್​ ಮಹಿಳಾ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.

News First Live Kannada

Leave a comment

Your email address will not be published. Required fields are marked *