ಮಹಿಳಾ ಸುರಕ್ಷತೆಗೆ ಆದ್ಯತೆ; ದೆಹಲಿಯಲ್ಲಿ 1.40 ಲಕ್ಷ CCTV ಕ್ಯಾಮರಾ ಅಳವಡಿಕೆ- ಕೇಜ್ರಿವಾಲ್​​​


ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಸರ್ಕಾರವು ಹೊಸದಾಗಿ 1.40 ಲಕ್ಷ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸಮೀಕ್ಷೆಯೊಂದರ ಪ್ರಕಾರ, ಪ್ರತಿ ಕಿಲೋಮೀಟರ್​ಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳ ಪೈಕಿ ದೆಹಲಿಯು ವಿಶ್ವದ 150 ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ಈ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ದೆಹಲಿಯಲ್ಲಿ 2.75 ಲಕ್ಷ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದಿದ್ದಾರೆ.

ನಾವು ಲಂಡನ್, ನ್ಯೂಯಾರ್ಕ್, ಸಿಂಗಾಪುರ್ ಮತ್ತು ಪ್ಯಾರಿಸ್‌ಗಿಂತ ಸಾಕಷ್ಟು ಮುಂದಿದ್ದೇವೆ. ಇನ್ನು ಕ್ಯಾಮರಾಗಳನ್ನು ಅಳವಡಿಸಿದ ನಂತರ ಮಹಿಳಾ ಭದ್ರತೆಯಲ್ಲಿ ಸುಧಾರಣೆಯಾಗಿದ್ದು, ಅಪರಾಧ ಪ್ರಕರಣಗಳನ್ನು ಬಗೆಹರಿಸುವಲ್ಲಿ ಪೊಲೀಸರಿಗೆ ಹೆಚ್ಚಿನ ನೆರವು ದೊರೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

News First Live Kannada


Leave a Reply

Your email address will not be published. Required fields are marked *