ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಂಡಿದ್ದ ಭಾರತ ಮಹಿಳಾ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದ್ರೆ, ಫೈನಲ್​ ಪಂದ್ಯದಲ್ಲಿ ಎಡವಿದ್ದ ಭಾರತ ಮಹಿಳಾ ತಂಡ ರನ್ನರ್ ಅಪ್‌ ಆಗಿತ್ತು. 2020ರ ಮಾರ್ಚ್​ 8ರಂದು ಈ ಪಂದ್ಯಾವಳಿ ಮುಗಿದರೂ ಬಿಸಿಸಿಐ ಆಟಗಾರ್ತಿಯರಿಗೆ ಬಹುಮಾನದ ಹಣವನ್ನ ಪಾವತಿಸಿರಲಿಲ್ಲ. ಇದರಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಸಿಸಿಐ, ಈಗ ವಿಶ್ವಕಪ್​ ತಂಡದಲ್ಲಿದ್ದ ಆಟಗಾರ್ತಿಯರಿಗೆ ತಲಾ 26 ಸಾವಿರ ಡಾಲರ್‌ ಮೊತ್ತ ಬಿಡುಗಡೆ ಮಾಡಿದೆ. ಜೊತೆಗೆ ಕಳೆದ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಸರಣಿಯ ಪಂದ್ಯದ ಸಂಭಾವನೆಯನ್ನೂ ವಿತರಿಸಿದೆ..2020ರ ಐಸಿಸಿ ಟಿ20 ವಿಶ್ವಕಪ್‌ ಬಹುಮಾನ ಮೊತ್ತವನ್ನ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಬಿಸಿಸಿಐ ಬಿಡುಗಡೆ ಮಾಡಿದೆ

The post ಮಹಿಳಾ T20 ವಿಶ್ವಕಪ್​ ಬಹುಮಾನ ಹಣ ಬಿಡುಗಡೆ- ಪ್ರತಿ ಸದಸ್ಯರಿಗೆ 19 ಲಕ್ಷ ರೂ. appeared first on News First Kannada.

Source: newsfirstlive.com

Source link