ಹಾಸನ: ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಅಂತ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ. ಅಮಾವಾಸ್ಯೆ ದಿನ ನಾನು ಬಹಳ ಖಾರವಾಗಿ ಹೇಳುತ್ತಿರುವೆ, ಜನ್ರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಅಂತ ಜಿಲ್ಲಾಧಿಕಾರಿಗೆ ಹೆಚ್​ಡಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಹೇಳಿದ್ದೇನೆ, 15ಕ್ಕೂ ಹೆಚ್ಚು ಪತ್ರ ಬರೆದಿದ್ದೇನೆ. ಒಬ್ಬರ ಮೇಲೆ ಒಬ್ಬರು ಹೇಳುತ್ತಿದ್ದಾರೆ ಆದ್ರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಜನ್ರ ಜೊತೆ ಚಲ್ಲಾಟವಾಡ್ತಿದ್ದಾರೆ ಇವ್ರು, ಮುಖ್ಯ ಕಾರ್ಯದರ್ಶಿಯವರು ಹೇಳ್ತಾರೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 1ಕೋಟಿ ಹಣ ನೀಡಿದ್ದೇವೆ ಅಂತಾ, ಆದ್ರೆ ಒಂದು ಬಿಡುಗಾಸು ಬಂದಿಲ್ಲ ಸ್ವಾಮಿ, ಜಿಲ್ಲೆಯಲ್ಲಿ ಪ್ರತಿನಿತ್ಯ 40ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್ ಇಲ್ಲಾ ಅಂತಾರೆ, ಜಿಲ್ಲೆಯಲ್ಲಿ ಇಬ್ಬರು ಎಸಿ ಇದ್ದಾರೆ. ಅವರಿಗೂ ಜವಾಬ್ದಾರಿ ನೀಡಿ.

’20 ಕೋಟಿ ಬೇಕು ಅಂತಾ ಪತ್ರ ಬರೆಯಿರಿ’

ಜಿಲ್ಲೆಗೆ 20ಕೋಟಿ ಬೇಕೆಂದು ಪತ್ರ ಬರೆಯಿರಿ ಅಂತ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಸಿಎಂ ಹಣ ಬಿಡುಗಡೆ ಮಾಡ್ರಿ ಅಂತ ಹೇಳಿದ್ರು, ಡಿಸಿ ಹಣ ಕೊಡುತ್ತಿಲ್ಲ. ಬಡವರನ್ನು ನೋಡಿದ್ರೆ ಹೊಟ್ಟೆ ಉರಿದುಹೋಗುತ್ತೆ ಅಂತ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ರು.
ಅಷ್ಟೇ ಅಲ್ಲ, ಮತ್ತೆ ಮಹಿಳೆಯರು ತಮ್ಮ ಮಾಂಗಲ್ಯವನ್ನು ಮಾರವಾಡಿಯವರಿಗೆ ಅಡಮಾನವಿಡುತ್ತಿದ್ದಾರೆ ಜಿಲ್ಲಾಧಿಕಾರಿಯವರೇ ಅಂತ ಹೇಳಿದ್ರು. ಜೊತೆಗೆ, ಒಂದು ಹೆರಿಗೆ ಮಾಡಿಸಲು ಸ್ಪರ್ಶ ಆಸ್ಪತ್ಪೆಯಲ್ಲಿ 10 ಲಕ್ಷ ಕೇಳ್ತಿದ್ದಾರೆ. ಯಾಕೆ ಇದರ ಬಗ್ಗೆ ಕ್ರಮ ಕೈಗೂಳ್ಳುತ್ತಿಲ್ಲ. ಇದೆಲ್ಲಾ ನೋಡ್ತಿದ್ರೆ, ಡಿಸಿ ಈ ವಿಚಾರದಲ್ಲಿ ಶಾಮೀಲಾಗಿದ್ದಾರೆ ಎನಿಸುತ್ತೆ. ಜನ್ರೇ ಎದ್ದೇಳಿ. .ಪ್ರಾಣ ಉಳಿಯುವ ತನಕ ಹೋರಾಡಿ ಎಂದು ಕರೆ ಕೊಡುವೆ ಅಂತ ಮಾಜಿ ಸಚಿವ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

ಇನ್ನು, ರಾಜ್ಯದಲ್ಲಿ 134 ಪಿಎಚ್ಇ, ಪಿಎಚ್ ಸಿ ಗಳಿದ್ದರೆ ಅದು ಹಾಸನ ಅದು ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಸಾಧನೆ. ಜಿಲ್ಲೆಯಲ್ಲಿ ಕಾಳಸಂತೆಯ ದಂಧೆಕೋರರಿದ್ದಾರೆ, ಅವರನ್ನು ಕೇಸ್ ಮಾಡಿ ಜೈಲಿಗೆ ಕಳುಹಿಸಿ. ಜಿಲ್ಲಾಧಿಕಾರಿಗಳೇ, ಸರ್ಕಾರದಿಂದ ಬಂದ ಸೌಲಭ್ಯವನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ನೀಡಿ. ಖಾಸಗಿಗೆ ನೀಡಬೇಡಿ. ಈ ಖಾಸಗಿ ಆಸ್ಪತ್ರೆಯ ಮೇಲೆ ದಾಳಿಯೇ ನಡೆದಿಲ್ಲ. ಇದರ ಹಿಂದೆ ಯಾರಿದ್ದಾರೆ ಗೊತ್ತು ಅಂತ ಜಿಲ್ಲಾಧಿಕಾರಿಗಳ ವಿರುದ್ಧ ಹೆಚ್.​ಡಿ.ರೇವಣ್ಣ ಕಿಡಿಕಾರಿದ್ದಾರೆ.

The post ಮಹಿಳೆಯರು ತಮ್ಮ ಮಾಂಗಲ್ಯವನ್ನ ಅಡವಿಡುತ್ತಿದ್ದಾರೆ -ಹಾಸನದ ಡಿಸಿಗೆ ಹೆಚ್​ಡಿ ರೇವಣ್ಣ ಎಚ್ಚರಿಕೆ appeared first on News First Kannada.

Source: newsfirstlive.com

Source link