ಬೆಂಗಳೂರು: ಲಾಕ್​ಡೌನ್ ಸಡಿಲಿಕೆ ಆಗ್ತಿದ್ದಂತೆ ನಗರದಲ್ಲಿ ಸರಗಳ್ಳರು ಆ್ಯಕ್ಟೀವ್ ಆಗಿದ್ದಾರೆ.  ಕೊಡಿಗೆಹಳ್ಳಿ ಹಾಗೂ ಜಯನಗರದಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗಿವೆ.

ಕಳ್ಳರು ವೃದ್ದೆಯ ಚೈನ್ ಕಸಿದು ಪರಾರಿಯಾದ ಘಟನೆ ಸಹಕಾರನಗರದ A ಬ್ಲಾಕ್​ನಲ್ಲಿ ನಡೆದಿದೆ. ಆ್ಯಕ್ಟಿವ ಗಾಡಿಯಲ್ಲಿ ಬಂದ ಖದೀಮರು ಲಕ್ಷ್ಮಿ ಎಂಬ ವೃದ್ಧೆಯ 12 ಗ್ರಾಂ ಚೈನ್ ಕಸಿದು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಜಯನಗರದ ಸಾಕಮ್ಮ ಗಾರ್ಡನ್ ಬಳಿ ಕಳ್ಳರು ರಾಜೇಶ್ವರಿ ಎಂಬ ಮಹಿಳೆಯ 72 ಗ್ರಾಂ ಮಾಂಗಲ್ಯ ಸರ ಕದ್ದೊಯ್ದಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

The post ಮಹಿಳೆಯರೇ ಹುಷಾರು.. ಬೆಂಗಳೂರು ಅನ್​ಲಾಕ್ ಆಗ್ತಿದ್ದಂತೆ ಅ್ಯಕ್ಟಿವ್ ಆದ ಸರಗಳ್ಳರು appeared first on News First Kannada.

Source: newsfirstlive.com

Source link